ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ದೇಶದಾದ್ಯಂತ ಕೃಷಿಕರ ಮನೆಮಾತಾದ ಪುತ್ತೂರಿನ ಎಸ್. ಆರ್. ಕೆ .ಲಾಡರ್ಸ್ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಮೇ (25) ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅದ್ದೂರಿ ಸಮಾರೋಪ ಸಮಾರಂಭ

Published

on

ಪುತ್ತೂರು : ಕರ್ನಾಟಕ, ಕೇರಳ ಆಂಧ್ರಪ್ರದೇಶ
ಹಾಗು ತಮಿಳುನಾಡು ರಾಜ್ಯಗಳಲ್ಲಿ ಕೃಷಿ ಯಂತ್ರೋಪಕರಣಗಳಿಗೆ ಮನೆ ಮಾತಾಗಿರುವ ಪುತ್ತೂರಿನ ಬ್ರಾಂಡ್ ‘ಎಸ್.ಆರ್.ಕೆ. ಲ್ಯಾಡರ್ಸ್’ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದು, ಆ ಪ್ರಯುಕ್ತ ಅದ್ದೂರಿ ಸಮಾರೋಪ ಸಮಾರಂಭ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
‘ಎಸ್.ಆರ್.ಕೆ.’ ಲ್ಯಾಡರ್ಸ್‌ ಪುತ್ತೂರು ಇದರ ರಜತ ಸಂಭ್ರಮದ ಸಮಾರೋಪ ಮತ್ತು ಸಾಂಸ್ಕೃತಿಕ ಸಮಾರಂಭ ಮೇ.25 ರಂದು ಕೊಯಿಲ ಕಲಾಯಿ ಗುತ್ತುವಿನಲ್ಲಿ ನಡೆಯಲಿದೆ.


ಕಾರ್ಯಕ್ರಮದ ವಿವರ




ಮೇ.25 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬಿಳಿನೆಲೆ ತಂಡದಿಂದ ಕುಣಿತ ಭಜನೆ ನಡೆಯಲಿದೆ.
ಮಧ್ಯಾಹ್ನ 2.30ರಿಂದ ಮಂಗಳೂರಿನ ಸುಪ್ರಸಿದ್ದ ಶ್ರೀ ಶಬರಿ ಸಿಂಗಾರಿ ಮೇಳದವರಿಂದ ಚೆಂಡೆ ವಾದನ ಜರುಗಲಿದೆ.
ಮಧ್ಯಾಹ್ನ 3ರಿಂದ ಶ್ರುತಿ ಗಾಯನ ಮೆಲೋಡಿಸ್‌ ಮಂಗಳೂರು ತಂಡದವರಿಂದ ಸಂಗೀತ ರಸಮಂಜರಿ, ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿ ಪ್ರಸಿದ್ದಿ ಪಡೆದ ಪ್ರತಿಭಾನ್ವಿತ ನೃತ್ಯ ನಿರ್ದೇಶಕ ಯಶ್ವಿನ್ ದೇವಾಡಿಗ ನಿರ್ದೇಶನ ನೃತ್ಯ ವೈವಿಧ್ಯ ಮೂಡಿಬರಲಿದೆ.
ಸರಿಗಮಪ ಖ್ಯಾತಿಯ ಪ್ರಜ್ಞಾ ಮರಾಟೆ ಮತ್ತು ಸಮನ್ವಿ ರೈ ಪುತ್ತೂರು ಇವರಿಂದ ಸುಮಧುರ ಗಾಯನ ಹಾಗೂ ಖ್ಯಾತ ತುಳು ಕನ್ನಡ ಚಲನಚಿತ್ರ ತಾರೆಯರ ಸಮಾಗಮ ನಡೆಯಲಿದೆ.
ಸಂಜೆ 4 ರಿಂದ ಕನ್ನಡದ ಖ್ಯಾತ ಹಾಸ್ಯ ಮತ್ತು ಮಿಮಿಕ್ರಿ ಕಲಾವಿದರಾದ ರಿಚರ್ಡ್ ಲೂಯಿಸ್ ಹಾಗೂ ತಂಡದಿಂದ ಹಾಸ್ಯ ರಸಸಂಜೆ ಮೂಡಿಬರಲಿದೆ.
ಸಂಜೆ 6ರಿಂದ ಗಣ್ಯ ಅತಿಥಿಗಳ ಉಪಸ್ಥಿತಿಯೊಂದಿಗೆ ಸಭಾ ಕಾರ್ಯಕ್ರಮ ಜರುಗಲಿದೆ.
ಹಲವು ಸಾಧಕರಿಗೆ ಸನ್ಮಾನ ನಡೆಯಲಿದೆ. ಬಳಿಕ ರಜತ ಸಂಭ್ರಮದ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.
ಸ್ನೇಹ ಸಮ್ಮಿಲನ ಸಹಭೋಜನ ಜರುಗಲಿದೆ. ರಾತ್ರಿ 10ಗಂಟೆ ಬಳಿಕ ತುಳು ಯಕ್ಷ ತೆಲಿಕೆ ತೆಂಕುತಿಟ್ಟಿನ ಸುಪ್ರಸಿದ್ದ ಹಾಸ್ಯ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ರಸಸಂಜೆ ಮೂಡಿಬರಲಿದೆ.
ಸಂಸ್ಥೆಯ ಮಾಲಕರಾದ ಕೇಶವ ಅಮೈ ನೇತೃತ್ವದಲ್ಲಿ ಕುಟುಂಬಸ್ಥರು, ಸಿಬ್ಬಂದಿ ವರ್ಗ ಹಾಗೂ ಕಾರ್ಯಕ್ರಮ ಸಂಯೋಜಕರ ವಿಶೇಷ ಮುತಾಲಿಕೆಯಲ್ಲಿ ಸಮಾರಂಭ ನಡೆಯಲಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement