Published
7 months agoon
By
Akkare News28ನೇ ಲೋಕಸಭೆಗೆ ನಡೆದಿರುವ ಚುನಾವಣೆಗಳ ಮತಗಳ ಎಣಿಕೆ ಕಾರ್ಯ ಜೂ.4 ರಂದು ನಡೆಯಲಿದ್ದು, ಇನ್ನೊಂದೇ ವಾರ ಬಾಕಿ ಉಳಿದಿದೆ. ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗಲೇ 6 ಹಂತದ ಚುನಾವಣೆ ನಡೆದಿದೆ. ಜೂ.1ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಎಪ್ರಿಲ್ 26 ಮತ್ತು ಮೇ.7ರಂದು ಎರಡು ಹಂತದಲ್ಲಿ ತಲಾ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ನಡೆದಿತ್ತು. ದ.ಕ. ಲೋಕಸಭಾ ಕ್ಷೇತ್ರದಲ್ಲಿ ಎ.26ರಂದು ಚುನಾವಣೆ ನಡೆದಿರುವುದರಿಂದ ಫಲಿತಾಂಶಕ್ಕಾಗಿ ಬಹಳ ದೀರ್ಘವಾಗಿ ಕಾಯುವಂತಾಗಿದೆ. 1991 ರಿಂದ ತೊಡಗಿ ಇದುವರೆಗೆ ಸತತ 33 ವರ್ಷಗಳಿಂದ ಮಂಗಳೂರು ಮತ್ತು ದ.ಕ. ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತನ್ನ ಹಿಡಿತದಲ್ಲಿರಿಸಿಕೊಂಡಿದೆ.
ಜಗತ್ತಿನೆಲ್ಲೆಡೆ ಇರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಫಲಿತಾಂಶದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ. ಪಕ್ಷ ಸಂಘಟನೆಯ ಜತೆಗೆ ಕ್ಷೇತ್ರದಲ್ಲಿ ಆಗಿರುವ ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಪರಿಣಾಮ ಬೀರಿದ್ದು ಅದು ಫಲಿತಾಂಶವನ್ನೆ ಬದಲಿಸಬಲ್ಲಷ್ಟು ಸಶಕ್ತವಾಗಿತ್ತೇ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಚುನಾವಣಾ ರಾಜಕೀಯಕ್ಕೆ ಹೊಸಬರಾದ ಎಂಬುದನ್ನು ಕಾದುನೋಡಬೇಕಾಗಿದೆ.