Published
7 months agoon
By
Akkare Newsಪುತ್ತೂರು :2023ರ ಮೇ. 7ರಂದು ಪುತ್ತೂರಿನ ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮತ್ತು 4ನೇ ಆರೋಪಿಗಳಾದ ಮಂಜುನಾಥ್ (ಮಂಜ) ಹಾಗೂ ಕೇಶವ ಪಡೀಲ್ ಇವರ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕೃತಗೊಳಿಸಿದೆ.
ದೂರುದಾರರ ಪರ ಸರ್ಕಾರಿ ಅಭಿಯೋಜಕಿ ಜಯಂತಿ ವಾದಮಂಡಿಸಿದ್ದು, ಕೆಲ ದಿನಗಳ ಹಿಂದೆ ಅರ್ಜಿಯನ್ನು ನ್ಯಾಯಲಯ ತಿರಸ್ಕೃತಗೊಳಿಸಿದೆ.ಹೈಕೋರ್ಟ್ ನ್ಯಾಯವಾದಿಗಳ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, ದೂರುದಾರ ವಿಖ್ಯಾತ್ ಪರ ಹೈಕೋರ್ಟ್ ನ್ಯಾಯವಾದಿಗಳಾದ ರಾಜಶೇಖರ್ ಹಿಲ್ಯಾರ್ ಸುದೀರ್ಘ ವಾದಮಂಡಿಸಿದ್ದು, ಹೈಕೋರ್ಟ್ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದೆ.