ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಭರ್ಜರಿ ಗುಡ್‌ ನ್ಯೂಸ್ : ವಾಟ್ಸಪ್ ಸ್ಟೇಟಸ್‌ ಅವಧಿ ಒಂದು ನಿಮಿಷಕ್ಕೆ ಏರಿಕೆ!

Published

on

ಈಗಲೇ ಅಪ್ಡೇಟ್‌ ಮಾಡಿ ವಾಟ್ಸಪ್‌ (WhatsApp) ಬಳಕೆದಾರರಿಗೆ ಇದು ಭರ್ಜರಿ ಗುಡ್ ನ್ಯೂಸ್‌! ವಾಟ್ಸಪ್‌ ಸ್ಟೇಟಸ್‌ (WhatsApp Staus) ಅವಧಿ ಇದೀಗ ಒಂದು ನಿಮಿಷಕ್ಕೆ ಏರಿಕೆಯಾಗಿದೆ. ವಿಶ್ವಾದ್ಯಂತ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್‌ನಲ್ಲಿ ದಿನಕ್ಕೊಂದು ಹೊಸ ಹೊಸ ಫೀಚರ್‌ಗಳು ಸೇರಿಕೊಳ್ಳುತ್ತಿದೆ. ವಾಟ್ಸಪ್ ಸಂಸ್ಥೆಯು, ಇದೀಗ ‘ವಾಟ್ಸಪ್ ಸ್ಟೇಟಸ್‌’ನಲ್ಲಿ (WhatsApp Status) ಈ ಪ್ರಮುಖ ಬದಲಾವಣೆ ತಂದಿದೆ.

ವಾಟ್ಸಪ್‌ (WhatsApp) ಬಳಕೆದಾರರಿಗೆ ಇದು ಭರ್ಜರಿ ಗುಡ್ ನ್ಯೂಸ್‌! ವಾಟ್ಸಪ್‌ ಸ್ಟೇಟಸ್‌ (WhatsApp Staus) ಅವಧಿ ಇದೀಗ ಒಂದು ನಿಮಿಷಕ್ಕೆ ಏರಿಕೆಯಾಗಿದೆ. ವಿಶ್ವಾದ್ಯಂತ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್‌ನಲ್ಲಿ ದಿನಕ್ಕೊಂದು ಹೊಸ ಹೊಸ ಫೀಚರ್‌ಗಳು ಸೇರಿಕೊಳ್ಳುತ್ತಿದೆ. ವಾಟ್ಸಪ್ ಸಂಸ್ಥೆಯು, ಇದೀಗ ‘ವಾಟ್ಸಪ್ ಸ್ಟೇಟಸ್‌’ನಲ್ಲಿ (WhatsApp Status) ಈ ಪ್ರಮುಖ ಬದಲಾವಣೆ ತಂದಿದೆ.
ಹೌದು, ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಆ್ಯಪ್ ವಾಟ್ಸಪ್, ಈಗ ಮತ್ತೆ ಸ್ಟೇಟಸ್ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ. ಇದರಿಂದಾಗಿ ವಾಟ್ಸಪ್ ಬಳಕೆದಾರರು ಒಂದು ನಿಮಿಷ (60 ಸೆಕೆಂಡ್) ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿದೆ.
ಪ್ರಸ್ತುತ ನಾವು 30 ಸೆಕೆಂಡ್‌ಗಳ ವಿಡಿಯೋವನ್ನು ವಾಟ್ಸಪ್‌ ಸ್ಟೇಟಸ್‌ನಲ್ಲಿ ಹಾಕುತ್ತಿದ್ದೇವೆ. ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್‌ಗಾಗಿ ವಾಟ್ಸಪ್ ಸಂಸ್ಥೆಯು, ಬೀಟಾ ಸ್ಥಿತಿ ನವೀಕರಣಗಳ ಮೂಲಕ ಒಂದು ನಿಮಿಷದವರೆಗಿನ ವೀಡಿಯೊಗಳನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವ ಸೌಲಭ್ಯವನ್ನು ಪರಿಚಯಿಸಿದೆ. ವಾಟ್ಸಪ್ ಸಂಸ್ಥೆಯು, ತನ್ನ ಬೀಟಾ ಕಾರ್ಯಕ್ರಮದ ಭಾಗವಾಗಿ ಸ್ಟೇಟಸ್ ಕಾರ್ಯಕ್ಕಾಗಿ ಈ ಹೊಸ ಫೀಚರ್‌ ಒದಗಿಸಿದೆ. ಐಫೋನ್ ಮೊಬೈಲ್ ಬಳಕೆದಾರರಿಗೆ ಕಂಪನಿಯು, iOS 24.10.10.74 ಅಪ್‌ಡೇಟ್‌ಗಾಗಿ ವಾಟ್ಸಪ್ ಬೀಟಾದೊಂದಿಗೆ ಫೀಚರ್‌ ಅನ್ನು ಲಾಂಚ್ ಮಾಡುತ್ತಿದೆ. ಇಲ್ಲಿಯವರೆಗೆ, ವಾಟ್ಸಪ್ ಬಳಕೆದಾರರು ತಮ್ಮ ಸ್ಟೇಟಸ್‌ನಲ್ಲಿ ಕೇವಲ 30 ಸೆಕೆಂಡ್‌ಗಳ ವರೆಗಿನ ವೀಡಿಯೊಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ, ವಾಟ್ಸಪ್ ಬಳಕೆದಾರರಿಗೆ ಒಂದು ನಿಮಿಷದ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳಲು ಅವಕಾಶ ನೀಡುವ ಗುರಿಯನ್ನು ಹೊಂದಿದೆ.


ನಾವು ಇಚ್ಛಿಸುವ ಆಪ್ತರಿಗೆ (ನಿರ್ದಿಷ್ಟ ನಂಬರ್‌) ಮಾತ್ರ, ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಅನುಕೂಲವಾಗುವಂತೆ ಈ ಫೀಚರ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಆಂಡ್ರಾಯ್ಡ್ 2.24.9.17 ಅಪ್‌ಡೇಟ್‌ಗಾಗಿ ವಾಟ್ಸಪ್ ಸಂಸ್ಥೆಯು, ಈ ಫೀಚರ್‌ ಅನ್ನು ಇನ್ನಷ್ಟು ಪರಿಷ್ಕರಿಸಲು ಮುಂದಾಗಿದೆ. ಅನೇಕ ಬದಲಾವಣೆ ತರುವ ರೂಪುರೇಷೆಗಳನ್ನು ಹಾಕಿಕೊಂಡಿದೆ ಎಂದು ತಿಳಿದುಬಂದಿದೆ. 2017ರಲ್ಲಿ ವಾಟ್ಸಪ್ ಸಂಸ್ಥೆ ಮೊದಲ ಬಾರಿಗೆ ಸ್ಟೇಟಸ್ ಆಯ್ಕೆ ಪರಿಚಯಿಸಿದ್ದು, ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಿತ್ತು. ಅಪ್ಲೋಡ್‌ ಮಾಡಿದ ಫೈಲ್‌ಗಳು 24 ಗಂಟೆಗಳ ನಂತರ ತನ್ನಷ್ಟಕ್ಕೆ ತಾನೇ ಮರೆಯಾಗುತ್ತವೆ. ಅಲ್ಲಿಯವರೆಗೆ ಬಳಕೆದಾರನ ಸಂಪರ್ಕದಲ್ಲಿರುವರಿಗೆ ಮಾತ್ರ ಸ್ಟೇಟಸ್‌ ಕಾಣಿಸುತ್ತದೆ. ಇತ್ತೀಚಿಗೆ ವಾಟ್ಸಪ್‌ ‘ಸ್ಟೇಟಸ್’ ಫೀಚರ್‌ನಲ್ಲಿ ಬದಲಾವಣೆ ತಂದಿದ್ದು, ವಾಟ್ಸಪ್‌ ಸ್ಟೇಟಸ್‌ ಅನ್ನು ನೇರವಾಗಿ ಫೇಸ್‌ಬುಕ್‌ ಒಡೆತನದ ಯಾವುದೇ ಸಾಮಾಜಿಕ ಆಪ್‌ ಖಾತೆಗೆ ಶೇರ್‌ ಮಾಡಬಹುದಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement