Published
7 months agoon
By
Akkare Newsಪುತ್ತೂರು: ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಮರೀಲ್ ಕಾಡಮನೆ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಆಟೋ ರಿಕ್ಷಾ ಚಾಲಕ, ಮೂಲತಃ ಜಾಲ್ಸೂರಿನ ಕುಕ್ಕಂದೂರಿನ ಮನೋಜ್ ಎಂಬವರ ಪತ್ನಿ ಸಂಧ್ಯಾ (45) ಎಂದು ಗುರುತಿಸಲಾಗಿದೆ.
ಕಳೆದ 20 ವರ್ಷಗಳಿಂದ ಮನೋಜ್ ಅವರು ಪುತ್ತೂರಿನ ಮರೀಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮೇ 27ರಂದು ರಾತ್ರಿ ರಿಕ್ಷಾದಲ್ಲಿ ಬಾಡಿಗೆ ಮಾಡಲು ಮನೆಯಿಂದ ತೆರಳಿದ್ದ ಮನೋಜ್, ಮೇ 28ರಂದು ಬೆಳಿಗ್ಗೆ ಮನೆಗೆ ಹೋದಾಗ ಪತ್ನಿ ಮನೆಯ ಹಾಲ್‌ನ ಕಿಟಕಿಗೆ ನೇಣು ಬಿಗಿದು ಅಸ್ವಸ್ಥ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಸಂಧ್ಯಾ ಅವರು ಮೃತಪಟ್ಟಿದ್ದರು. ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.