Published
7 months agoon
By
Akkare Newsಕುಮಾರ ಪರ್ತತ ತಪ್ಪಲಿನಲ್ಲಿ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಗುರುವಾರ ಮಧ್ಯಾಹ್ನ ವೇಳೆ ಸುರಿದ ಭಾರೀ ಮಳೆಗೆ ಕುಕ್ಕೆ ಸುಬ್ರಮಣ್ಯ ಮತ್ತು ಆದಿಸುಬ್ರಮಣ್ಯ ಭಾಗದ ಕೆಲವು ಅಂಗಡಿಗಳಿಗೆ ನೀರು ನುಗ್ಗಿದ್ದು ವರ್ತಕರು ಆತಂಕಕ್ಕೆ ಒಳಗಾಗಿದ್ದಾರೆ.
ನೂಚಿಲ ಎಂಬಲ್ಲಿ ಪ್ರಸನ್ನ ತೋಡ್ತಿಲ್ಲಯ ಎಂಬವರ ಅಂಗಳದಲ್ಲೇ ಮಳೆ ಕೆಸರು ನೀರು ಹರಿದು ಹೋಗಿ ಜಾಗದ ಕಂಪೌಂಡು ಕುಸಿದಿದೆ. ನೂಚೀಲದಲ್ಲಿ ಕೆಲವು ಮನೆ ಅಂಗಳಕ್ಕೆ, ಸುಬ್ರಮಣ್ಯದ ಕೆಲವು ಅಂಗಡಿಗಳಿಗೆ, ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.