ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪುತ್ತೂರು: ರಸ್ತೆಗಳ ಬದಿಯಲ್ಲಿ ಬೆಳೆದಿರುವ ಗಿಡಗಂಟಿಗಳ ತೆರವು ಮಾಡಿ – ಇಲ್ಲವಾದಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಿಯೋಗ

Published

on

ಪುತ್ತೂರು: ನಗರ ಸಭೆಯ ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಹಾಗೂ ರಸ್ತೆಗಳೇ ಕಾಣದಂತೆ ಬೆಳೆದಿರುವ ಗಿಡಗಂಟಿಗಳನ್ನು ಮತ್ತು ಪೊದೆಗಳನ್ನು ಅತಿ ಶೀಘ್ರದಲ್ಲಿ ತೆರವು ಮಾಡಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿಯವರ ನಿಯೋಗ ನಗರಸಭೆ ಪೌರಾಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಪುತ್ತೂರು ನಗರಸಭೆಯ ವಾರ್ಡುಗಳ ರಸ್ತೆಗಳ ಬದಿಗಳಲ್ಲಿ ಮೊರೆಗಳು ಹಾಗೂ ಗಿಡಗಂಟಿಗಳು ಬೆಳೆದು ಕೆಲವು ಕಡೆ ರಸ್ತೆಗಳೇ ಕಾಣದಂತಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಡೆದಾಡಲು ತುಂಬಾ ತೊಂದರೆಯಾಗುತ್ತಿದೆ. ಬೆಳೆದಿರುವ ಪೊದೆಗಳಲ್ಲಿ ಹಾವುಗಳು ಇರುವ ಅಪಾಯವಿದ್ದು, ಇಲ್ಲಿ ನಡೆದಾಡುವ ನಾಗರಿಕರಿಗೆ ಹಾಗೂ ಮಕ್ಕಳಿಗೆ ಹಾವುಗಳಿಂದ ಅಪಾಯವಾಗುವ ಸಂಭವವಿರುತ್ತದೆ. ಆದುದರಿಂದ ರಸ್ತೆ ಬದಿಗಳಲ್ಲಿ ಬೆಳೆದಿರುವ ಪೊದೆಗಳು ಹಾಗೂ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದು ಬಹಳ ಆಗತ್ಯವಿರುತ್ತದೆ. ಆದರೆ ನಗರಸಭೆಯಲ್ಲಿ ಪೊದೆಗಳನ್ನು ಸವರಲು ಹಾಗೂ ಗಿಡಗಂಟಿಗಳನ್ನು ಕಡಿಯಲು, ಕಟ್ಟಿಂಗ್ ಮೆಷಿನ್‌ಗಳಿದ್ದರೂ ಸಹ ಗಿಡಗಂಟಿಗಳನ್ನು ಕಡಿಯುವಂತಹ ಕೆಲಸ ಕಾರ್ಯ ಮಾಡಲು ನಗರಸಭೆಯ ಆರೋಗ್ಯ ನಿರೀಕ್ಷಕರುಗಳು ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಆದ್ದರಿಂದ ನಗರಸಭಾ ವ್ಯಾಪ್ತಿಯ ರಸ್ತೆ ಬದಿಗಳ ಗಿಡಗಂಟಿಗಳನ್ನು ಕಡಿಯುವ ಹಾಗೂ ಪೊದೆಗಳನ್ನು ತೆರವು ಮಾಡುವ ಕೆಲಸವನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ವಾರ್ಡುಗಳ ಚರಂಡಿಗಳ ಹಾಗೂ ದೊಡ್ಡ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ಈಗಾಗಲೇ ‘ಗುತ್ತಿಗೆ ನೀಡಿದ್ದು, ಗುತ್ತಿಗೆದಾರರು, ಕೆಲವೇ ಕೆಲವು ವಾರ್ಡುಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ಭಾಗ ಚರಂಡಿಗಳ ಹೂಳೆತ್ತುವ ಕೆಲಸವನ್ನು ಮಾಡಿರುತ್ತಾರೆ. ಆದರೆ ದೊಡ್ಡ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ಈವರೆಗೂ ನಡೆಸಿರುವುದಿಲ್ಲ. ಮಳೆಗಾಲ ಮುಗಿಯುತ್ತಾ ಬಂದಿರುವುದರಿಂದ ಇನ್ನೂ ಹೂಳೆತ್ತುವ, ಆವಶ್ಯಕತೆ ಕೂಡಾ ಇರುವುದಿಲ್ಲ. ಆದುದರಿಂದ ಹೊಳೆತ್ತುವ ಕಾಮಗಾರಿಯ ಬಗ್ಗೆ ತಾವು ಸರಿಯಾದ ಪರಿಶೀಲನೆ ಮಾಡಿ ಆಗಿರುವ

ಕಾಮಗಾರಿಗೆ ಮಾತ್ರ ಬಿಲ್ಲು ಪಾವತಿಸಬೇಕು. ಮಳೆಗಾಲ ಮುಗಿದಿರುವುದರಿಂದ ಇನ್ನು ಯಾವುದೇ ಹೂಳೆತ್ತುವ ಕಾಮಗಾರಿಯನ್ನು ನಡೆಸದೇ ಅದನ್ನು ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದಕ್ಕೆ ತಪ್ಪಿದಲ್ಲಿ ನಗರ ಕಾಂಗ್ರೇಸ್‌ ವತಿಯಿಂದ ನಗರಸಭೆಯ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದುದೆಂದು ಅವರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ಮಳೆಗಾಲದ ಪೂರ್ವದಲ್ಲಿ ನಗರಸಭೆ ವ್ಯಾಪ್ತಿಯ ಚರಂಡಿಗಳ ಹೂಳೆತ್ತುವ ಕಾಮಗಾರಿಯ ಗುತ್ತಿಗೆ ನೀಡದೆ ನಗರಸಭೆಯಲ್ಲಿರುವ ಹಿಟಾಚಿ ಮತ್ತು ಜೆಸಿಬಿ ಯಂತ್ರವನ್ನು ಬಳಸಿ ಹೂಳೆತ್ತುವ ಕೆಲಸವನ್ನು ಮಾಡುವ ಮೂಲಕ ನಗರಸಭೆಯ ಸಾರ್ವಜನಿಕ ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಬೇಕಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.

 

 

ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ನೇತೃತ್ವದ ಕಾಂಗ್ರೆಸ್ ನಿಯೋಗ ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಗೆ ಮನವಿ ಸಲ್ಲಿಸುತ್ತಿರುವುದು, ನಿಯೋಗದಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಬಲ್ನಾಡ್,ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ರೋಶನ್ ರೈ ಬನ್ನೂರು, ರಾಮಚಂದ್ರ ನಾಯ್ಕ್ ಮಂಜಲ್ಪಡ್ಪು, ಸಿರಿಲ್ ರೋಡ್ರಿಗಸ್ ನಗರ ಕಾಂಗ್ರೆಸ್ ಪ್ರದಾಧಿಕಾರಿಗಳಾದ ವಿಕ್ಟರ್ ಪಾಯ್ಸ್, ಕೆಮ್ಮಿ0ಜೆ, ಇಸ್ಮಾಯಿಲ್ ಬೊಳುವಾರ್,ವಾಲ್ಟರ್ ಸಿಕ್ವೆರಾ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ಕೆ, ಸಾಯಿರಾ ಭಾನು ಬನ್ನೂರು, ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ,, ಕೃಷ್ಣನಗರ ಬೂತ್ ಅಧ್ಯಕ್ಷ ಹರೀಶ್ ಆಚಾರ್ಯ, ಯಂಗ್ ಬ್ರಿಗೇಡ್ ನ ಜಯಂತ ನಗರ ಮುಂತಾದವರು ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement