Published
1 year agoon
By
Akkare News
ಪುತ್ತೂರು: ಪುತ್ತೂರು ನಗರಸಭೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್ಗೆ ವಿಶೇಷ ಯೋಜನೆಯಡಿ 20 ಕೋಟಿ ಅನುದಾನ ನೀಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ನಗರಾಭಿವೃದ್ದಿ ಸಚಿವ ರಹೀಂ ಖಾನ್ ಅವರಿಗೆ ಮನವಿ ಮಾಡಿದ್ದಾರೆ.






ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ತುರ್ತಾಗಿ ಅನೇಕ ಅಭಿವೃದ್ದಿ ಕಾಮಗಾರಿ ನಡೆಯಬೇಕಿದ್ದು ಇದಕ್ಕಾಗಿ ವಿಶೇಷ ಯೋಜನೆಯಡಿ ೧೫ ಕೋಟಿ ಅನುದಾನ ನೀಡಬೇಕು ಮತ್ತು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿಗೆ ಹೆಚ್ಚುವರಿ 5 ಕೋಟಿ ನೀಡುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದಾರೆ.








