Connect with us

ಅಭಿವೃದ್ಧಿ ಕಾರ್ಯಗಳು

ಪುತ್ತೂರು ಸರ್ಕಾರಿ ಆಸ್ಪತ್ರೆ: ಹೆಚ್ಚುವರಿ ಡಯಾಲಿಸೀಸ್ ಯಂತ್ರಗಳಿಗೆ ಚಾಲನೆ

Published

on

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 17 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, 157 ಮಂದಿ ರೋಗಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. 48 ಮಂದಿ ಡಯಾಲಿಸಿಸ್‌ನ ನಿರೀಕ್ಷೆಯಲ್ಲಿದ್ದಾರೆ. ಇದೀಗ 6 ಯಂತ್ರಗಳ ಸೇರ್ಪಡೆಯಿಂದಾಗಿ ಅವರಿಗೂ ಉಚಿತ ಸೇವೆ ದೊರೆಯಲಿದೆ’ ಎಂದು ಶಾಸಕ ಅಶೋಕ್ ರೈ ಹೇಳಿದರು.

ಪುತ್ತೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚುವರಿ ಯಾಗಿ ಅಳವಡಿಸಲಾದ 6 ಡಯಾಲಿಸಿಸ್ ಯಂತ್ರಗಳಿಗೆ ಅವರು ಸೋಮವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.

ಖಾಸಗಿಯಾಗಿ ಡಯಾಲಿಸಿಸ್ ಮಾಡಿಸಲು ಕನಿಷ್ಠ ₹1,650 ನೀಡಬೇಕಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುವ ರೋಗಿಗಳಿಗೆ ಸರ್ಕಾರವೇ ಪ್ರತಿ ಡಯಾಲಿಸಿಸ್‌ಗೆ ₹1,500 ನೀಡುತ್ತಿದೆ. ‌ಹಿಂದಿನ ಸರ್ಕರದ ‌ಅವಧಿಯಲ್ಲಿ ಡಯಾಲಿಸಿಸ್ ವ್ಯವಸ್ಥಿತವಾಗಿ ನಡೆಯುತ್ತಿರಲಿಲ್ಲ. ಒಂದು ಕಿಟ್‌ನಲ್ಲಿ ಮೂರು ಡಯಾಲಿಸಿಸ್ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಬಂದ ಬಳಿಕ ಹೊಸ ಏಜೆನ್ಸಿ ಮಾಡಿ ಒಂದು ಕಿಟ್‌ನಲ್ಲಿ 1 ಡಯಾಲಿಸಿಸ್ ಮಾತ್ರ ಮಾಡಲಾಗುತ್ತಿದೆ. ಕಡಬದಲ್ಲೂ ಮೂರು ಯಂತ್ರ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಆಸ್ಪತ್ರೆಯ ಸುರಕ್ಷಾ ಸಮಿತಿ ಸದಸ್ಯರಾದ ಅರುಣಾ ದಿನಕರ ರೈ, ಸಿದ್ದಿಕ್, ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್, ಕಾಂಗ್ರೆಸ್ ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ರವೀಂದ್ರ ರೈ ನೆಕ್ಕಿಲು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸನತ್ ರೈ, ಜಯಪ್ರಕಾಶ್ ಬದಿನಾರು, ಫಾರೂಕ್ ಬಾಯಬೆ ಇದ್ದರು.


Continue Reading
Click to comment

Leave a Reply

Your email address will not be published. Required fields are marked *

Advertisement