Published
16 hours agoon
By
Akkare News
ಈ ತಂಡದಲ್ಲಿ ಉಮ್ಮುನಿಧಾ, ಉದ್ವಿತಾ ರಕ್ಷಾ, ಫಾತಿಮತ್ ಅಫ್ರಾ, ಧನ್ವಿ, ವರ್ಷಾ ಶೆಟ್ಟಿ, ದಿಶಾ ಕೆ ಆಯಿಷತ್ ಆಲಿಯಾ, ಹರ್ಷಿತಾ, ಶ್ರೇಯ, ಸನ್ನಿದಿ, ರಿಷಿಕಾ, ಅಪೇಕ್ಷಾ ರೈ,ಜೀವಿತಾ ಉತ್ತಮ ನಿರ್ವಣೆ ತೋರಿದರು. ಈ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಹಕಾರದೊಂದಿಗೆ,ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಗೌರವಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಅಧ್ಯಕ್ಷರಾದ ಸುರೇಂದ್ರ ರೈ ಮತ್ತು ಪ್ರಧಾನ ಕಾರ್ಯದರ್ಶಿ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ರೈ ಕೊರ್ಮoಡ ರವರ ಮಾರ್ಗದರ್ಶನದಲ್ಲಿ ಲಿಟ್ಲ್ ಫ್ಲವರ್ ಶಾಲೆ ದರ್ಬೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಕಬಡ್ಡಿ ತರಬೇತುದಾರರಾದ ಬಾಲಕೃಷ್ಣ ರೈ ಪೊರ್ದಾಲ್, ಮಂಗಳೂರು ವಿಶ್ವವಿದ್ಯಾಲಯದ ಕಬಡ್ಡಿ ತಂಡದ ಮಾಜಿ ಕಪ್ತಾನ, ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರು ಮತ್ತು ತರಬೇತುದಾರರು ಅಬ್ದುಲ್ ಆಸೀಫ್, ಕಬಡ್ಡಿ ತರಬೇತುದಾರರಾದ ಪ್ರಸಾದ್ ಕೊಣಾಜೆ ತರಬೇತಿ ನೀಡಿದ್ದಾರೆ.
ಕಬಡ್ಡಿ ಅಭಿಮಾನಿಗಳ ಗಮನ ಸೆಳೆದ ತಂಡದ ನಾಯಕಿ ಹಾರ್ದಿಕಳ ಆಟ ಶಿಕ್ಷಣ ಇಲಾಖೆಯ ಪಂದ್ಯಾಟದಲ್ಲಿ ಸತತ 3ನೇ ಬಾರಿಗೆ ರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸಿರುವ ಕು.ಹಾರ್ದಿಕ 5 ಪಂದ್ಯಾಟದಲ್ಲಿ 120 ಕ್ಕಿಂತ ಅಧಿಕ ಅಂಕಗಳನ್ನು ವಯಕ್ತಿಕವಾಗಿ ಗಳಿಸಿದ್ದು ಪ್ರೇಕ್ಷಕರ ಮನಗೆದ್ದಿತು. ತನ್ನ ಸೈಡ್ ಜಂಪ್, ಟೋ ಟಚ್, ರೋಲ್ ಆಟದಿಂದ ಪ್ರೇಕ್ಷಕರ ಮನಸು ಗೆದ್ದ ಹಾರ್ದಿಕ,ಟೀಮ್ ಇಂಡಿಯಾ ಆಟಗಾರ್ತಿ ಕಾರ್ತಿಕಾಳನ್ನು ನೆನಪಿಸಿ ಕಂಡು ಜೂನಿಯರ್ ಕಾರ್ತಿಕಾ ಎನ್ನುವ ಹೆಸರಿನಿಂದ ಪ್ರೇಕ್ಷಕರು ಪ್ರೋತ್ಸಾಹ ನೀಡುತ್ತಿದ್ದದ್ದು ಕಂಡು ಬಂತು .ಫೈನಲ್ ಪಂದ್ಯಾಟ ದಲ್ಲಿ ಹಾರ್ದಿಕಳ ಆಟ ನೋಡಲೆಂದೆ ಹಲವು ಅಭಿಮಾನಿಗಳು ಸೇರಿದ್ದು ಹಾರ್ದಿಕಳ ಒನ್ ಮ್ಯಾನ್ ಆರ್ಮಿ ಆಟಕ್ಕೆ ಸಾಕ್ಷಿ ಆಗಿತ್ತು.





