Published
14 hours agoon
By
Akkare News
ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕಬಡ್ಡಿಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಶನಿವಾರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪ್ರಬಲ ಎದುರಾಳಿ ಇರಾನ್ ತಂಡವನ್ನು 37-34 ಅಂಕಗಳಿಂದ ಮಣಿಸಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದೆ.

ಆರಂಭದಿಂದಲೇ ಚುರುಕಿನ ರೈಡಿಂಗ್ ಮತ್ತು ಚತುರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಭಾರತೀಯ ಆಟಗಾರ್ತಿಯರು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತ 22-16 ಅಂಕಗಳ ಮುನ್ನಡೆಯಲ್ಲಿತ್ತು. ಆದರೆ ಅಂತಿಮ ಹಂತದಲ್ಲಿ ಇರಾನ್ ತಂಡ ಭರ್ಜರಿ ಕಂಬ್ಯಾಕ್ ಮಾಡುವ ಮೂಲಕ ಭಾರತದ ಮುನ್ನಡೆಯನ್ನು ಕಡಿಮೆ ಮಾಡಿತು.
. ಧೈರ್ಯ ಕಳೆದುಕೊಳ್ಳದ ಭಾರತದ ವನಿತೆಯರು ಪಂದ್ಯ ಕೊನೆಯ ಕ್ಷಣದತ್ತ ಸಾಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ಉಸಿರು ಬಿಗಿಹಿಡಿಯುವಂತಹ ವಾತಾವರಣ ನಿರ್ಮಾಣವಾಗಿತ್ತು. ಈ ತೀವ್ರ ಒತ್ತಡದ ನಡುವೆಯೂ ಧೈರ್ಯ ಕಳೆದುಕೊಳ್ಳದ ಭಾರತದ ಆಟಗಾರ್ತಿಯರು ಕೊನೆಯ ಹಂತದಲ್ಲಿ ರಕ್ಷಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಖಚಿತಪಡಿಸಿಕೊಂಡರು.



