Connect with us

ಕ್ರೀಡೆ

Asian Games 2026: ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಚಾಂಪಿಯನ್ ಪಟ್ಟ ಉಳಿಸಿಕೊಂಡ ಭಾರತೀಯ ನಾರಿಯರು

Published

on

ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕಬಡ್ಡಿಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಶನಿವಾರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪ್ರಬಲ ಎದುರಾಳಿ ಇರಾನ್ ತಂಡವನ್ನು 37-34 ಅಂಕಗಳಿಂದ ಮಣಿಸಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದೆ.

ಆರಂಭದಿಂದಲೇ ಚುರುಕಿನ ರೈಡಿಂಗ್ ಮತ್ತು ಚತುರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಭಾರತೀಯ ಆಟಗಾರ್ತಿಯರು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತ 22-16 ಅಂಕಗಳ ಮುನ್ನಡೆಯಲ್ಲಿತ್ತು. ಆದರೆ ಅಂತಿಮ ಹಂತದಲ್ಲಿ ಇರಾನ್ ತಂಡ ಭರ್ಜರಿ ಕಂಬ್ಯಾಕ್ ಮಾಡುವ ಮೂಲಕ ಭಾರತದ ಮುನ್ನಡೆಯನ್ನು ಕಡಿಮೆ ಮಾಡಿತು.

. ಧೈರ್ಯ ಕಳೆದುಕೊಳ್ಳದ ಭಾರತದ ವನಿತೆಯರು ಪಂದ್ಯ ಕೊನೆಯ ಕ್ಷಣದತ್ತ ಸಾಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ಉಸಿರು ಬಿಗಿಹಿಡಿಯುವಂತಹ ವಾತಾವರಣ ನಿರ್ಮಾಣವಾಗಿತ್ತು. ಈ ತೀವ್ರ ಒತ್ತಡದ ನಡುವೆಯೂ ಧೈರ್ಯ ಕಳೆದುಕೊಳ್ಳದ ಭಾರತದ ಆಟಗಾರ್ತಿಯರು ಕೊನೆಯ ಹಂತದಲ್ಲಿ ರಕ್ಷಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಖಚಿತಪಡಿಸಿಕೊಂಡರು.
.
ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತ ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 22-16 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ನಂತರದ ಅವಧಿಯಲ್ಲಿ ಇರಾನ್ ಒತ್ತಡ ಹೆಚ್ಚಿಸಿದರೂ ಭಾರತ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿತು. ಅಂತಿಮವಾಗಿ ಭಾರತ 37-34 ಅಂಕಗಳಿಂದ ಇರಾನ್ ತಂಡವನ್ನು ಮಣಿಸಿ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕಬಡ್ಡಿ ಚಿನ್ನದ ಪದಕವನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿತು. ಭಾರತ ಮಹಿಳಾ ತಂಡವು ಏಷ್ಯನ್ ಗೇಮ್ಸ್‌ನ ಕಬಡ್ಡಿಯಲ್ಲಿ ನಾಲ್ಕು ಆವೃತ್ತಿಗಳಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದೆ. 2018ರಲ್ಲಿ ಮಾತ್ರ ಇರಾನ್ ವಿರುದ್ಧ ಸೋತು ಚಿನ್ನದ ಪದಕ ಕೈತಪ್ಪಿತ್ತು. ಇದೀಗ ಈ ಬಾರಿ ಮತ್ತೆ ‘ಚಿನ್ನ’ ಗೆದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version