ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಕರಾವಳಿಯಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ

Published

on

ಮಂಗಳೂರು: ಮುಸ್ಲಿ ಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಬಕ್ರೀದ್‌(ಈದುಲ್ ಅಝ್ಹಾ) ಅನ್ನು ಕರಾವಳಿ ಯಾದ್ಯಂತ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಮುಸಲ್ಮಾನರು ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್‌ ಖುತ್ಬಾ ಮತ್ತುಪ್ರವಚನ ಆಲಿಸಿ, ಈದ್‌ ಸಂದೇಶ ಸ್ವೀಕರಿಸಿದರು. ಬಳಿಕ ಸಂಬಂಧಿಕರು- ಸ್ನೇಹಿತರ ಮನೆಗಳಿಗೆ ಸೌಹಾರ್ದ ಭೇಟಿ ನೀಡಿ ಶುಭಾಶಯ ಕೋರಿದರು.ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ ಸಹಿತ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಮೂಲ್ಕಿ, ಸುರತ್ಕಲ್‌ ಮೊದಲಾದೆಡೆಗಳ ಮಸೀದಿಗಳಲ್ಲೂ ಸಾಮೂಹಿಕ ನಮಾಝ್, ಈದ್‌ ಖುತಾº ಮತ್ತು ಪ್ರವಚನಗಳು ನೆರವೇರಿದವು.ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್‌ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಅಲ್‌-ಅಝರಿ ನೇತೃತ್ವದಲ್ಲಿ ಈದ್‌ ನಮಾಝ್ ಹಾಗೂ ಖುತ್ಬಾ ಪಾರಾಯಣ ನಡೆಯಿತು. ಮಂಗಳೂರು ಝೀನತ್‌ ಭಕ್ಷ್ ಕೇಂದ್ರ ಜುಮಾ ಮಸ್ಜಿದ್‌ನ ಖತೀಬ್‌ ಅಬ್ದುಲ್‌ ಅಕ್ರಂ ಬಾಖವಿ ನಮಾಝ್  ನೇತೃತ್ವ ನೀಡಿದರು.

ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ನಮಾಜ್‌ನಲ್ಲಿ ಭಾಗವಹಿಸಿದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ, ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಭಾಗವಹಿಸಿ ಶುಭ ಹಾರೈಸಿದರು.
ಈದ್‌ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗಿ#ರತ್‌ಗಾಗಿ ಪ್ರಾರ್ಥಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version