Published
8 hours agoon
By
Akkare Newsಪುತ್ತೂರು: ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಮಾರು 25 ಕುಟುಂಬಗಳಿಗೆ 1993ರಲ್ಲಿ ನಿವೆಶನದ ಹಕ್ಕು ಪತ್ರ ನೀಡಲಾಗಿತ್ತು, ಹಕ್ಕು ಪತ್ರ ನೀಡಲಾಗಿತ್ತೇ ವಿನಾ ಅವರಿಗೆ ನಿವೇಶನ ಗುರುತು ಮಾಡಿರಲಿಲ್ಲ, ನಿವೇಶನಕ್ಕಾಗಿ ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ಮಾಡಿದರೂ ಫಲನೀಡಲಿಲ್ಲ, ಕೊ ನೆಗೆ ಪುತ್ತೂರು ಶಾಸಕರ ಒಂದೇ ಒಂದು ಫೋನ್ ಕರೆಗೆ ಎಚ್ಚರಗೊಂಡ ಅದಿ ಕಾರಿಗಳು ೨೫ ಮಂದಿಯಲ್ಲಿ ಏಳು ಮಮದಿಗೆ ಮೊದಲ ಹಂತದ ನಿವೇಶನವನ್ನು ನೀಡಿದ್ದಾರೆ.
.
ಐತ್ತೂರು ಗ್ರಾಮದ ಹನುಮಂತನ್, ವರದರಾಜ್, ತ್ಯಾಗಮೂರ್ತಿ, ಪಾರ್ಥೀವನ್, ಜಯಕುಮಾರ್, ಕುಮಾರ್ ಪಿ, ಹಾಗೂ ಜಿ ರವಿ ಎಂಬವರಿಗೆ ನಿವೇಶನ ನೀಡಲಾಗಿದೆ. ಹಕ್ಕು ಪತ್ರ ಪಡೆದುಕೊಂಡವರ ಪೈಕಿ ಕೆಲವರು ಮರಣಹೊಂದಿ ದ್ದಾರೆ. ಇವರಿಗೆ ವಿನಯಕುಮಾರ್ ಸೊರಕೆಯವರು ಪುತ್ತೂರು ಶಾಸಕರಾಗಿದ್ದ ಸಂದರ್ಬದಲ್ಲಿ ಹಕ್ಕು ಪತ್ರವನ್ನು ನೀಡಲಾಗಿತ್ತು. ಐತ್ತೂರು ಗ್ರಾಮ ಆಗಿನ ಕಾಲದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಿತ್ತು. ಹಕ್ಕು ಪತ್ರ ಪಡೆದುಕೊಂಡ 25 ಕುಟುಂಬಗಳಿಗೆ ನಿವೇಶನ ನೀಡಿರಲಿಲ್ಲ. ನಿವೇಶನ ಕೊಡಿ ಎಂದು ಕಳೆದ 25 ವರ್ಷಗಳಿಂದ ಸಿಕ್ಕ ಸಿಕ್ಕವರಲ್ಲಿ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಶಾಸಕ ಅಶೋಕ್ ರೈಗೆ ದೂರು
ಈ ಬಗ್ಗೆ ಐತ್ತೂರು ಗ್ರಾಪಂ ಸದಸ್ಯರಾದ ಈರೇಶ್ ಗೌಡರವರು ಫಲಾನುಭವಿಗಳ ನ್ನು ಕರೆದುಕೊಂಡು ಪುತ್ತೂರು ಶಾಕರಾದ ಅಶೋಕ್ ರೈ ಕಚೇರಿಗೆ ಬಂದಿದ್ದರು. ಶಾಸಕರಲ್ಲಿ ವಿಷಯ ತಿಳಿಸಿದಾಗ ಸಂಬಂಧಿಸಿದ ಅಧಿಕಾರಿಗೆ ಕರೆ ಮಾಡಿದ ಶಾಸಕರು ಯಾರಿಗೆಲ್ಲಾ 1993 ರಲ್ಲಿ ಹಕ್ಕು ಪತ್ರವನ್ನು ನೀಡಲಾಗಿದೆಯೋ ಅವರಿಗೆಲ್ಲಾ ನಿವೇಶನವನ್ನು ಯಾಕೆ ಕೊಟ್ಟಿಲ್ಲ? 25ವರ್ಷಗಳಿಂದ ಅವರನ್ನು : ಯಾಕೆ ಸತಾಯಿಸ್ತಿದ್ದೀರಿ, ನಿವೇಶನ ಇಲ್ಲದೇ ಇದ್ದರೆ ಹಕ್ಕು ಪತ್ರವನ್ನು ಯಾಕೆ ಕೊಟ್ಟಿದ್ದೀರಿ? ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಹೇಳಿದ್ದ ಶಾಸಕರು ತಕ್ಷಣವೇ ಎಲ್ಲಾ 25ಮಂದಿ ಕುಟುಂಬಸ್ಥರಿಗೆ ನಿವೇಶನ ನೀಡುವಂತೆ ಸೂಚಿಸಿದ್ದರು. ಈ ಬಗ್ಗೆ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಅವರು ಈ ಫಲಾನುಭವಿಗೆ ನೆರವಾಗಿದ್ದರು. ಅದಿ , ಕಾರಿಗಳ ಬಳಿ ಫಲಾನುಭವಿಗಳನ್ನು ಕರೆದುಕೊಂಡು ಹೋಗಿ ಅಲ್ಲಿ ದಾಖಲೆಗಳ ನ್ನು ನೀಡಿ ಶಾಸಕರ ಸೂಚನೆಯಂತೆ ಶೀಘ್ರವೇ ನಿವೇಶನ ಮಂಜೂರುಗೊಳಿಸುವಲ್ಲಿ ಸಹಕಾರವನ್ನು ನೀಡಿದ್ದರು.
ಹಕ್ಕು ಪತ್ರ ನೀಡಿದ್ದಾರೆ ನಿವೇಶನ ನೀಡಿಲ್ಲ ಎಂದು ಐತ್ತೂರು ಗ್ರಾಮದ ೨೫ ಕುಟುಂಬಸ್ಥರು ನನ್ನ ಬಳಿ ಬಂದಿದ್ದರು. ಬಡವರಿಗೆ ಮನೆ ಕಟ್ಟಲು ಜಾಗದ ಹಕ್ಕು ಪತ್ರವನ್ನು ನೀಡಿದ್ದಾರೆ. ಅಂದಿನ ಶಾಸಕರಾಗಿದ್ದ ವಿನಯಕುಮಾರ್ ಸೊರಕೆಯವರು ಬಡವರಿಗೆ ಸಹಾಯವಾಗಲೆಂದು ಹಕ್ಕು ಪತ್ರವನ್ನು ನೀಡಿದ್ದರು. ಆದರೆ ಹಕ್ಕು ಪತ್ರ ನೀಡಿದ ಬಳಿಕ ನಿವೇಶನ ನೀಡುವ ಕೆಲಸವನ್ನು ಇಲಾಖಾ ಅಧಿಕಾರಿಗಳು ಮಾಡಬೇಕಿತ್ತು. ಯಾಕೆ ಆರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಗಮ ನಕ್ಕೆ ಈ ವಿಚಾರ ಬಂದ ಕೂಡಲೇ ಸ್ಪಂದಿಸಿದ್ದೇನೆ. ಪ್ರಥಮ ಹಂತದಲ್ಲಿ 7ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಹಕ್ಕು ಪತ್ರ ಕೆಲವು ಮರಣಹೊಂದಿ ದ್ದಾರೆ. ಹಕ್ಕು ಪತ್ರ ಪಡೆದ ಎಲ್ಲರಿಗೂ ನಿವೇಶನ ನೀಡುವಂತೆ ಸೂಚನೆಯನ್ನು ನೀಡಿದ್ದೇನೆ. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹಾಗೂ ಗ್ರಾಪಂ ಸದಸ್ಯ ಈರೇಶ್‌ರವರು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿ ಸಿದ್ದಾರೆ.
ಅಶೋಕ್ ರೈ ಶಾಸಕರು, ಪುತ್ತೂರು
ಅದ್ಭುತ ಕೆಲಸ ಶಾಸಕರಿಂದ ಆಗಿದೆ; ಬಡಗನ್ನೂರು
ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಸಕ ಅಶೋಕ್ ರೈ ಅವರಿಂದ ಅದ್ಭುತ ಕೆಲಸವಾಗಿದೆ. ಇದು ಆಗುತ್ತದೆ, ನಿವೇಶನ ಸಿಗುತ್ತದೆ ಎಂಬ ಆಸೆಯನ್ನೇ ಬಿಟ್ಟಿದ್ದರು. 25ವರ್ಷಗಳಿಂದ ಬಡ ಕುಟುಂಬಗಳು ಮಾಡಿದ ಹೋರಾಟಕ್ಕೆ ಶಾಸಕರಿಂದ ನ್ಯಾಯ ಸಿಕ್ಕಿದೆ.ಇಂದು ಆ ಕುಟುಂಬಗಳಿಗೆ ಆಗಿರುವ ಸಂತೋಷ ಅಷ್ಟಿಷ್ಟಲ್ಲ. ಒಬ್ಬ ಜನಪ್ರತಿನಿಧಿಯಾದವರು ಹೇಗೆ ಸಹಾಯ ಮಾಡಬಹುದು, ಬಡವರ ಕಣ್ಣೀರೊರೆಸಬಹುದು ಎಂಬುದಕ್ಕೆ ಶಾಸಕರು ನಿದರ್ಶನವಾಗಿದ್ದಾರೆ ಎಂದು ಆಬಿಪ್ರಾಯಿಸಿದರು.
ಯಾರಿದಂಲೂ ಆಗದ್ದು ಶಾಸಕರು ಮಾಡಿದ್ದಾರೆ: ಫಝಲ್ ಕೋಡಿಂಬಾಳ -ಕಳೆದ 25ವರ್ಷಗಳಿಂದ ಗ್ರಾಪಂ ಸದಸ್ಯ ಈರೇಶ್ ಗೌಡ, ಕೃಷ್ಣಪ್ಪ ಸೇರಿದಂತೆ ಹಲವು ಮಂದಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದರು ಆದರೆ ನ್ಯಾಯ ಸಿಕ್ಕಿರಲಿಲ್ಲ, ಪುತ್ತೂರು ಶಾಸಕರ ಬಳಿ ನಮಗೆ ನ್ಯಾಯ ಸಿಕ್ಕಿದೆ, ಬಡವರಿಗೆ ಸ್ಪಂದನೆ ನೀಡುವ ಶಾಅಸಕರ ಮನೋಸ್ಥಿತಿ ಕಂಡು ನಮಗೂ ಅಚ್ಚರಿಯಾಗಿದೆ, ಯಾರಿದಂಲೂ ಮಾಡಲಾಗದ ಒಂದು ಪುಣ್ಯದ ಕೆಲಸವನ್ನು ಮಾಡಿರುವುದು ಅಭಿನಂದ ನಾರ್ಹವಾಗಿದೆ ಎಂದು ಮಾಜಿ ತಾಪಂ ಸದಸ್ಯ ಫಝಲ್ ಕೋಡಿಂಬಾಳ ಅಭಿ ಪ್ರಾಯಿಸಿದ್ದಾರೆ.