Connect with us

ಇತ್ತೀಚಿನ ಸುದ್ದಿಗಳು

ಇರುವೈಲು ತಾರಾನಾಥ ಪೂಜಾರಿ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ನೇಮಕ

Published

on

ಮೂಡುಬಿದಿರೆ: ಕರ್ನಾಟಕ ಸರಕಾರವು ಕರ್ನಾಟಕ ಹೈಕೋರ್ಟ್‌ನ ಪದಾಂಕಿತ ಹಿರಿಯ ವಕೀಲರಾದ ಇರುವೈಲು ತಾರಾನಾಥ ಪೂಜಾರಿ ಅವರನ್ನು ರಾಜ್ಯದ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ನೇಮಕ ಮಾಡಿದೆ.

ಅಡ್ವಕೇಟ್ ಸಂತೋಷ್ ಎಸ್. ಗೋಗಿ, ಹೆಚ್ಚುವರಿ ಅಡ್ವಕೇಟ್ ಜನರಲ್‌ರವರ ಕಚೇರಿಯಿಂದ ತೆರವಾಗಿರುವ ಹುದ್ದೆಗೆ ತಾರನಾಥ್ ಅವರನ್ನು ನೇಮಿಸಲಾಗಿದೆ.
ಮೂಡುಬಿದಿರೆ ತಾಲೂಕಿನ ಇರುವೈಲು ಮೂಲದವರಾದ ತಾರಾನಾಥ ಪೂಜಾರಿ ಅವರು ವಕೀಲ ವೃತ್ತಿಯೊಂದಿಗೆ ಸಮಾಜಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಇರುವೈಲು ಸರ್ಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version