ಪುತ್ತೂರು: ಆತ್ಮೀಯ ಬಂಧುಗಳು ಪುತ್ತೂರು ತಾಲೂಕಿನ ಚಿಕ್ಕ ಮುಡ್ನೂರು ಗ್ರಾಮದ ನಿವಾಸಿ ವೃತ್ತಿಯಲ್ಲಿ ಅಡುಗೆ ಮಾಡಿ ಜೀವನ ಸಾಗಿಸುತ್ತಿರುವ ಭಾಸ್ಕರ ಪೂಜಾರಿ ಅವರು ಮೆದುಳು ಸೋಂಕಿನಿಂದ ಬಳಲುತ್ತಿದ್ದು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಬಡತನದ ಕುಟುಂಬದಿಂದ ಬಂದು ವೃತ್ತಿಯಲ್ಲಿ ಅಡುಗೆ ಮಾಡಿ ಜೀವನ ಸಾಗಿಸುತ್ತಿರುವ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈಗಾಗಲೇ 7 ಲಕ್ಷಕ್ಕೂ ಮಿಕ್ಕಿ ವೆಚ್ಚ ತಗಳಿದ್ದು ಇನ್ನು ಐದು ಲಕ್ಷ ಚಿಕಿತ್ಸೆಗೆ ಬೇಕು ಎಂದು ಆಸ್ಪತ್ರೆಯವರು ತಿಳಿಸಿರುತ್ತಾರೆ ನಮ್ಮ ಎಲ್ಲಾ ಅಕ್ಕರೆಯ ಅಭಿಮಾನಿಗಳು ಹಿತೈಷಿಗಳು ತಾವುಗಳು ತಮ್ಮ ಕೈಯಿಂದ ಆದಷ್ಟು ಧನ ಸಹಾಯವನ್ನು ನೀಡಿ ಭಾಸ್ಕರನ ಕುಟುಂಬಕ್ಕೆ ನೆರವಾಗಬೇಕು ಎಂದು ತಮ್ಮಲ್ಲಿ ವಿನಂತಿ. ಸದಾ ನಿಮ್ಮ ಸೇವೆಯಲ್ಲಿ “ನ್ಯೂಸ್ಅಕ್ಕರೆ”