ಪುತ್ತೂರು: ವಿದ್ಯಾಭಾರತಿ ವತಿಯಿಂದ ಹೈದ್ರಾಬಾದ್ ನಲ್ಲಿ ನಡೆದ 2026-27 ನೇ ಸಾಲಿನ ವಿದ್ಯಾ ಭಾರತಿಯ ದಕ್ಷಿಣ ಪ್ರಾಂತ್ಯ ಮಟ್ಟದ ಕ್ರೀಡಾಕೂಟದಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆರ್ಯನ್ ಕುಮಾರ್ 9ನೇ ತರಗತಿ ಬಿಹಾರ ಮೂಲದ ರಾಮ್ ಸಾಗರ್ ಷಾ ಮತ್ತು ಅನಿತಾ ದೇವಿ ದಂಪತಿಯ ಪುತ್ರ ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಎಸ್ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ಪ್ರಸನ್ನ ಕೆ ರವರು ಅಭಿನಂದನೆ ಸಲ್ಲಿಸಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ್, ಸುದೀಕ್ಷಾ ರವರು ತರಬೇತು ನೀಡಿರುತ್ತಾರೆ.