Published
16 hours agoon
By
Akkare News
ಬೃಹತ್ ರನ್ ಗುರಿ ತಲುಪುವ ಭರವಸೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಬ್ಯಾಟಿಂಗ್‌ನಲ್ಲಿ ಎಡವಿತು. ಆರಂಭದಲ್ಲೇ ಮೂರು ಫೋರ್‌ಗಳನ್ನು ಹೊಡೆದು ಲಯ ಕಂಡುಕೊಂಡ ಸಾಯಿ ಸುದರ್ಶನ್ (14) ಬ್ಯಾಟ್ ಕೈಬಿಟ್ಟು ಹಿಟ್ ವಿಕೆಟ್ ಆಗಿ ಹೊರ ನಡೆದರು. ಇವರ ಬೆನ್ನಲ್ಲೇ ಭುವನೇಶ್ವರ್ ಮಾರಕ ಬೌಲಿಂಗ್ ಎದುರಿಸಲು ಆಗದೇ ಶುಭಮನ್ ಗಿಲ್ ಕೇವಲ 2 ರನ್‌ಗೆ ಕ್ಲೀನ್ ಬೌಲ್ಡ್ ಆದರು. ಈ ನಡುವೆ ತಂಡಕ್ಕೆ ಆಸರೆಯಾಗಿ ಯಾರು ಕೂಡ ನಿಲ್ಲಲಾಗಲಿಲ್ಲ. ಜೋಶ್ ಬಟ್ಲರ್ 29, ನಿಶಾಂತ್ ಸಿಂಧು 5, ವಾಷಿಂಗ್ಟನ್ ಸುಂದರ್ ಕೇವಲ 8 ರನ್ ಅಷ್ಟೇ ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು. 51 ರನ್ ಇದ್ದಾಗಲೇ ತಂಡ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೇಸನ್ ಹೋಲ್ಡರ್ ಶೂನ್ಯ ಸುತ್ತಿ ನಿರ್ಗಮಿಸಿದರು. ಸೋಲು ಖಚಿತವಾಗಿದ್ದರೂ ಸಮಾಧಾನಕರ ಆಟವಾಡಿದ ರಾಹುಲ್ ತೆವಾಟಿಯಾ ಅರ್ಧಶತಕ (68) ಗಳಿಸಿದರು. ಆರ್‌ಸಿಬಿ ಬೌಲರ್‌ಗಳ ದಾಳಿಗೆ ಕಂಗೆಟ್ಟ ಗುಜರಾತ್ ಅಂತಿಮವಾಗಿ 19.3 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ ಸೋತು ಶರಣಾಯಿತು.