Connect with us

ಕ್ರೀಡೆ

ಲಿಖಿತ್ ರಾಮಚಂದ್ರ ಪುತ್ತೂರು ಅಕ್ವಾಟಿಕ್ ಕ್ಲಬ್ ನ ಈಜುಪಟು ರಾಷ್ಟ್ರೀಯ ಪಿನಿ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ ನಲ್ಲಿ ರಾಷ್ಟ್ರೀಯ ದಾಖಲೆ

Published

on

ಲಿಖಿತ್ ರಾಮಚಂದ್ರ ಪುತ್ತೂರು ಅಕ್ವಾಟಿಕ್ ಕ್ಲಬ್ ನ ಈಜುಪಟು , ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ 20 ಡಿಸೆಂಬರ್ 2025ರಿಂದ 22ರ ವರೆಗೆ ಮಂಗಳೂರಿನ ಎಮ್ಮೆಕೆರೆ ಅಂತರಾಷ್ಟ್ರೀಯ ಈಜುಕೊಳದಲ್ಲಿ ರಾಷ್ಟ್ರೀಯ ಪಿನಿ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ 5ನೇ ರಾಷ್ಟ್ರೀಯ ಪಿನಿ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ ನಲ್ಲಿ 200ಮೀ ಬೈ- ಪಿನ್ ನಲ್ಲಿ ಚಿನ್ನ, 100ಮೀ ಬೈ- ಪಿನ್ ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ 51.59 ಸೆಕೆಂಡುಗಳಲ್ಲಿ ಪೂರೈಸಿ 15ನೇ ವಯೋಮಾನದ ಬಾಲಕರ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ, ಇದಲ್ಲದೆ ಕರ್ನಾಟಕ ರೀಲೆ ತಂಡದಲ್ಲಿ ಬಾಗವಹಿಸಿ 2 ಚಿನ್ನದ ಪದಕ ಗಳಿಸುತ್ತಾರೆ.

ಕರ್ನಾಟಕ ರೀಲೆ ತಂಡವು 4×1 00ಮೀ ಬಾಲಕರ ರೀಲೆ ಮತ್ತು ಮಿಕ್ಸೆಡ್ ರಿಲೆಯಲ್ಲಿ ಈ ಹಿಂದಿನ ದಾಖಲೆ ಮುರಿದು ನೂತನ ದಾಖಲೆಯನ್ನು ದಾಖಲಿಸಿದೆ ಇವರು ಪುತ್ತೂರು ಬಾಲವನದ ಈಜು ಕೊಳದಲ್ಲಿ ಈಜು ನಿರ್ದೇಶಕರಾದ ಪಾರ್ಥ ವಾರಣಾಸಿ ಮತ್ತು ತರಬೇತುದಾರರಾದ ನಿರೂಪ್, ರೋಹಿತ್, ದೀಕ್ಷಿತ್ ಮತ್ತು ಕ್ರಾಂತಿ ತೇಜ ರವರಿಂದ ಕಳೆದ 10 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version