ಸವಣೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 01/10/2026ರಂದು ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಸಾಂದೀಪನಿಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ. 14ರ ವಯೋಮಾನದ ಹುಡುಗರ ವಿಭಾಗದಲ್ಲಿ ಆರ್ಯನ್ ಕುಮಾರ್ 9ನೇ ತರಗತಿ ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ವಿಷ್ಣುಜಿತ್ 8ನೇ ತರಗತಿ 100ಮೀ, 200ಮೀ, 400ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ, ಆಯುಷ್ 8ನೇ ತರಗತಿ 600ಮೀ ಓಟದ ಸ್ಪರ್ಧೆ ಪ್ರಥಮ, ಧನ್ವಿ 7ನೇ ತರಗತಿ 400 ಮೀ ಓಟದ ಸ್ಪರ್ಧೆ ದ್ವಿತೀಯ ಸ್ಥಾನ
14ರ ವಯೋಮಾನದ ಹುಡುಗರ ವಿಭಾಗದಲ್ಲಿ 4*100 ಮೀ ರಿಲೇ ಪ್ರಥಮ, 17ರ ವಯೋಮಾನದ ಗೌರವ್ 8ನೇ ತರಗತಿ ಉದ್ದ ಜಿಗಿತ ತೃತೀಯ ಸ್ಥಾನ, ತುಷಾರ್ 9ನೇ ತರಗತಿ 100ಮೀ ಓಟದ ಸ್ಪರ್ಧೆ ದ್ವಿತೀಯ ಸ್ಥಾನ, 17ರ ವಯೋಮಾನದ ಹುಡುಗರ ವಿಭಾಗದಲ್ಲಿ 4*100 ಮೀ ರಿಲೇ ದ್ವಿತೀಯ ಸ್ಥಾನ, ಹಸ್ತ 10ನೇ ತರಗತಿ ಎತ್ತರ ಜಿಗಿತ ಮತ್ತು ತ್ರಿವಿಧ ಜಿಗಿತ ಪ್ರಥಮ, ಅರ್ಪಿತಾ 10ನೇ ತರಗತಿ ತ್ರಿವಿಧ ಜಿಗಿತ ದ್ವಿತೀಯ, ಅಂಜನಾ 9ನೇ ತರಗತಿ ಗುಂಡು ಎಸೆತ ಮತ್ತು ಚಕ್ರ ಎಸೆತ ದ್ವಿತೀಯ, ಹಾಗೂ 14ರ ವಯೋಮಾನದ ಹುಡುಗರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ದೊರಕಿರುತ್ತದೆ ಮತ್ತು ಎಲ್ಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ್, ಹಾಗೂ ಕು. ಸುದೀಕ್ಷ ರವರು ತರಬೇತು ನೀಡಿರುತ್ತಾರೆ. ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಎಸ್ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಇವರಿಗೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ ಎಂದು ಮುಖ್ಯ ಶಿಕ್ಷಕರಾದ ಶ್ರೀ ಪ್ರಸನ್ನ ಕೆ ರವರು ತಿಳಿಸಿದ್ದಾರೆ.