Published
9 months agoon
By
Akkare News
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆd ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಭರ್ಜರಿ ಜಯಗಳಿಸುವ ಮೂಲಕ ಈ ಸಲ ಕಪ್ ತಮ್ಮದಾಗಿಸಿಕೊಂಡಿದೆ. ಆ ಮೂಲಕ 18 ವರ್ಷಗಳ ಪ್ರಶಸ್ತಿಯ ಬರ ನೀಗಿಸಿದೆ. ಆರ್ ಸಿ ಬಿ ಜಯಗಳಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.
ಐಪಿಎಲ್ ( IPL) ಪಂದ್ಯಾವಳಿಯಲ್ಲಿ ಕ ರಾಯಲ್ ಚಾಲೆಂಜರ್ ತಂಡ ಪಂಜಾಬ್ ಕಿಂಕ್ಸ್ ತಂಡವನ್ನು ನೆಲ ಕಚ್ಚುವಂತೆ ಮಾಡಿ, ಕನ್ನಡಿಗರ ಮುಖದಲ್ಲಿ ಮಂದಹಾಸ ಮೂಡಿಸಿದೆ..
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು 9 ವಿಕೆಟ್ ಕಳೆದುಕೊಂಡು 190 ರನ್ ಮಾಡಿದರೆ, ಪಂಜಾಬ್ ತಂಡವು 184 ರನ್ ಮಾಡಿತು
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬೆಂಗಳೂರು ತಂಡದ ಹೆಚ್ಚಿನ ಬ್ಯಾಟರ್ ಗಳು ಉತ್ತಮ ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅನುಭವಿ ವಿರಾಟ್ ಕೊಹ್ಲಿ ಅವರದ್ದೇ ಗರಿಷ್ಠ ಗಳಿಕೆ. ವಿರಾಟ್ 35 ಎಸೆತಗಳಲ್ಲಿ 43 ರನ್ ಮಾಡಿದರು. ಉಳಿದಂತೆ ರಜತ್ ಪಾಟಿದಾರ್ 26 ರನ್, ಮಯಾಂಕ್ ಅಗರ್ವಾಲ್ 24, ಲಿವಿಂಗ್ ಸ್ಟೋನ್ 25, ಜಿತೇಶ್ ಶರ್ಮಾ 24, ಶೆಫರ್ಡ್ 17 ರನ್ ಮಾಡಿದರು.
ಪಂಜಾಬ್ ಪರ ಅರ್ಶದೀಪ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಕಿತ್ತರು. ಅದರಲ್ಲೂ ಅರ್ಶದೀಪ್ ಅವರ ಮೂರು ವಿಕೆಟ್ ಕೊನೆಯ ಓವರ್ ನಲ್ಲಿ ಬಂದಿದ್ದು ವಿಶೇಷ. ಉಳಿದಂತೆ ಅಜ್ಮತುಲ್ಲಾ, ವೈಶಾಖ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
191 ರನ್ ಗುರಿ ಬೆನ್ನತ್ತಿದ್ದ ಪಂಜಾಬ್ ತಂಡಕ್ಕೆ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ ಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಆರ್ಯ 24 ರನ್ ಮಾಡಿದರೆ, ಪ್ರಭ್ ಸಿಮ್ರಾನ್ 26 ರನ್ ಮಾಡಿದರು. ಕಳೆದ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್ ಕೇವಲ ಒಂದು ರನ್ ಗೆ ಆಟ ಮುಗಿಸಿದರು.
ಉತ್ತಮ ಬ್ಯಾಟಿಂಗ್ ಮಾಡಿದ ಜೋಶ್ ಇಂಗ್ಲಿಶ್ 39 ರನ್ ಮಾಡಿದರು. 23 ಎಸೆತ ಎದುರಿಸಿದ ಅವರು ನಾಲ್ಕು ಸಿಕ್ಸರ್ ಬಾರಿಸಿದರು. ನೆಹಾಲ್ ವಧೇರ 18 ಎಸೆತಗಳಲ್ಲಿ 15 ರನ್ ಮಾಡಿ ಔಟಾದರು. ಸ್ಪೋಟಕ ಬ್ಯಾಟರ್ ಸ್ಟೋಯಿನಸ್ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದರಾದರೂ ಎರಡನೇ ಎಸೆತಕ್ಕೆ ಔಟಾದರು. ಭುವನೇಶ್ವರ್ ಕುಮಾರ್ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಿತ್ತು ಪಂದ್ಯದ ಗತಿ ಬದಲಿಸಿದರು.
ಕೊನೆಯ ಎರಡು ಓವರ್ ಗಳಲ್ಲಿ 41 ರನ್ ಅಗತ್ಯವಿತ್ತು. ಭುವಿ ಎಸೆದ ಮೊದಲ ಎಸೆತವನ್ನು ಶಶಾಂಕ್ ಸಿಕ್ಸರ್ ಗೆ ಬಾರಿಸಿದರು. ಆ ಓವರ್ ನಲ್ಲಿ ಒಟ್ಟು 13 ರನ್ ಬಂತು. ಕೊನೆಯ ಓವರ್ ನಲ್ಲಿ 29 ರನ್ ಅಗತ್ಯವಿದ್ದಾಗ ಜೋಶ್ ಹೇಜಲ್ ವುಡ್ ಬೌಲಿಂಗ್ ಮಾಡಿದರು. ಎರಡು ಸಿಕ್ಸರ್ ಬೌಂಡರಿನೊಂದಿಗೆ ಶಶಾಂಕ್ ಪ್ರಯತ್ನ ಪಟ್ಟರೂ ಜಯದ ಗಡಿ ದಾಟಲು ಸಾಧ್ಯವಾಗಲಿಲ್ಲ.