Published
6 hours agoon
By
Akkare Newsಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ 18ನೇ ಆವೃತ್ತಿಯ 52ನೇ ಪಂದ್ಯ ರೋಚಕತೆ ಹುಟ್ಟಿಸಿತ್ತು. ಕೊನೆಯ ಓವರ್‌ನಲ್ಲಿ ಯಶ್ ದಯಾಳ್ ನಡೆಸಿದ ಅಮೋಘ ಬೌಲಿಂಗ್ ನಡೆಸಿದ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ರನ್ ರೋಚಕ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಲೀಗ್ ಹಂತದಲ್ಲಿ ಈ ಹಿಂದೆ ಎರಡು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ಹಿರಿಮೆಯನ್ನು ರಜತ್ ಪಟಿದಾರ್ ತನ್ನದಾಗಿಸಿಕೊಂಡಿದೆ.
ಡೆತ್ ಓವರ್‌ಗಳಲ್ಲಿ ಅಮೋಘ ಬೌಲಿಂಗ್ ನಡೆಸಿದ ಆರ್‌ಸಿಬಿ ಬೌಲರ್ಸ್ ಅಬ್ಬರಿಸಿದರು. ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಚೆನ್ನೂ ಸೂಪರ್ ಕಿಂಗ್ಸ್ ಸೋಲು ಕಂಡಿದೆ. ವಿಜಯಲಕ್ಷ್ಮಿ ಕೊನೆಯ ವರೆಗೆ ಚಂಚಲೆಯಾಗಿದ್ದಳು. ಆದರೆ ಕೊನೆಯ ಓವರ್‌ನಲ್ಲಿ ಯಶ್ ದಯಾಳ್ ಬಿಗುವಿನ ದಾಳಿ ನಡೆಸಿದರು. ಈ ಓವರ್‌ನಲ್ಲಿ ಒಂದು ನೋಬಾಲ್ ಎಸೆದ್ರೂ ಸಿಎಸ್‌ಕೆ ಇದರ ಲಾಭವನ್ನು ಪಡೆಯುವಲ್ಲಿ ವಿಫಲರಾದರು. ದಯಾಳ್ ಎಸೆತದ ಲೋ ಫುಲ್ ಟಾಸ್ ಎಸೆತಗಳಿಗೆ ಉತ್ತರಿಸುವಲ್ಲಿ ಸಿಎಸ್‌ಕೆ ಬ್ಯಾಟರ್‌ಗಳು ವಿಫಲರಾದರು. ಕೊನೆಯ ಓವರ್‌ನಲ್ಲಿ 15 ರನ್ ಡಿಫೆಂಡ್ ಮಾಡಿಕೊಂಡ ಆರ್‌ಸಿಬಿ ಪಂದ್ಯವನ್ನು ಗೆದ್ದು ಬೀಗಿದೆ. ಈ ಜಯದ ಮೂಲಕ ಆರ್‌ಸಿಬಿ ಆಡಿರುವ 11 ಪಂದ್ಯಗಳಲ್ಲಿ 8 ಜಯ ದಾಖಲಿಸಿದ್ದು, 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 213 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 211 ರನ್ ಸಿಡಿಸಿ ಸೋಲು ಕಂಡಿತು.