Published
2 months agoon
By
Akkare News
ಮನವಿ ಪತ್ರದಲ್ಲೇನಿದೆ?
ಜಿಲ್ಲೆಯಲ್ಲಿ ದಕ್ಷಿಣ ಕನ್ನಡ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಆಶಾಕಾರ್ಯಕರ್ತೆಯರಾಗಿ 2009ನೇ ಸಾಲಿನಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದು, 2025ನೇ ಜೂನ್ ತಿಂಗಳ ಸುತ್ತೋಲೆಯನ್ವಯ ಆಶಾ ಕಾರ್ಯಕರ್ತೆಯರ ಸ್ಥಾನಗಳನ್ನು ಜನಸಂಖ್ಯೆಗೆ ಅನುಗುಣವಾಗಿ ತರ್ಕಬದ್ದಗೊಳಿಸುವುದರಿಂದ ಜಿಲ್ಲೆಯಲ್ಲಿ 1000 ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ಹೊಂದಿದ ಆಶಾಕಾರ್ಯಕರ್ತೆಯರನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸುವಂತೆ ಆದೇಶವಾದ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸುಮಾರು 153 ಆಶಾಕಾರ್ಯಕರ್ತೆಯರು ಕರ್ತವ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ಆದೇಶವನ್ನು ಹಿಂಪಡೆದು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರಿಗೆ ಯಾವುದೇ ತೊಂದರೆ ಉಂಟುಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ನಿಮ್ಮ ಜೊತೆ ಯಾವಾಗಲೂ ಅಶೋಕ್ ರೈ ಇದ್ದಾರೆ, ನನ್ನ ಮೇಲೆ ಇಟ್ಟ ಭರವಸೆಯನ್ನ ಉಳಿಸಿಕೊಳ್ಳುತ್ತೇನೆ’ ‘. ಸಿಎಂ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಹುಡುಕುವಂತಹ ಕೆಲಸವನ್ನು ನಾನು ಮಾಡುತ್ತೇನೆ ಎಂದು ಶಾಸಕ್ ಅಶೋಕ್ ರೈ ಅವರು ಭರವಸೆ ನೀಡಿದರು.*