ಪುತ್ತೂರು ಅಭಿವೃದ್ಧಿಯ ಕನಸು ಒಂದೊಂದಾಗಿ ನನಸಾಗುತ್ತಿದೆ. ಜನರ ಬಹುಕಾಲದ ಬೇಡಿಕೆಯಾಗಿದ್ದ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ 100 ಹಾಸಿಗೆಗಳ ಆಯುಷ್ ಆಸ್ಪತ್ರೆ ಸ್ಥಾಪನೆಗಾಗಿ ಶಾಸಕ ಅಶೋಕ್ ಕುಮಾರ್ ರೈ ಅವರು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಬನ್ನೂರು ಗ್ರಾಮದ ಕುಂಟ್ಯಾನದಲ್ಲಿ ಈಗಾಗಲೇ 5 ಎಕರೆ ಸರ್ಕಾರಿ ಜಮೀನನ್ನು ಆಯುಷ್ ಇಲಾಖೆಗೆ ಕಾಯ್ದಿರಿಸಿರುವುದು ಈ ಕನಸು ಸಾಕಾರವಾಗುವ ವಿಶ್ವಾಸವನ್ನು ಇನ್ನಷ್ಟು ಬಲಪಡಿಸಿದೆ. ಈ ಜಾಗದಲ್ಲೇ ಆಧುನಿಕ ಸೌಲಭ್ಯಗಳೊಂದಿಗೆ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುವ ನಿರೀಕ್ಷೆಯಿದೆ. ಒಂದು ಕಾಲದಲ್ಲಿ “ಪುತ್ತೂರಿಗೆ ದೊಡ್ಡ ಶಿಕ್ಷಣ ಸಂಸ್ಥೆಗಳು ಬರಲಾರವು” ಎಂದು ಹೇಳಿದವರಿಗೆ, ಇಂದು ಒಂದರ ಹಿಂದೆ ಒಂದರಂತೆ ಅಭಿವೃದ್ಧಿ ಯೋಜನೆಗಳು ಉತ್ತರ ನೀಡುತ್ತಿವೆ. ಸರಕಾರಿ ಮೆಡಿಕಲ್ ಕಾಲೇಜಿನ ಕನಸನ್ನು ಸಾಕಾರಗೊಳಿಸುವ ಹಾದಿಯಲ್ಲಿ ಮುನ್ನಡೆಯುತ್ತಿರುವ ಪುತ್ತೂರು, ಈಗ ಆಯುರ್ವೇದ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸೆಯ ಪ್ರಮುಖ ಕೇಂದ್ರವಾಗುವತ್ತ ಹೆಜ್ಜೆ ಇಡುತ್ತಿದೆ.
ಇದು ಕೇವಲ ಒಂದು ಕಾಲೇಜಿನ ಬೇಡಿಕೆಯಲ್ಲ…ಇದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಕನಸು.ಇದು ಬಡವರಿಗೆ ಗುಣಮಟ್ಟದ ಚಿಕಿತ್ಸೆಯ ಆಶಾಕಿರಣ.ಇದು ಪುತ್ತೂರಿನ ಹೆಮ್ಮೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಐತಿಹಾಸಿಕ ಪ್ರಯತ್ನ. “ಮಾತಲ್ಲ… ಕೆಲಸವೇ ಗುರುತು” ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ನಿರಂತರ ಪ್ರಯತ್ನ.