Connect with us

ಇತರ

ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ಸಂಘಟನೆಗೆ ಮತ್ತೊಂದು ಬಲ – ಬಿಲ್ಲವ ಬ್ರಿಗೇಡ್ ಬೆಳ್ಳಿಪ್ಪಾಡಿ ಗ್ರಾಮ ಸಮಿತಿ ರಚನೆ

Published

on

ಪುತ್ತೂರು: ಬಿಲ್ಲವ ಸಮಾಜವನ್ನು ಗ್ರಾಮ ಮಟ್ಟದಲ್ಲಿ ಇನ್ನಷ್ಟು ಸಂಘಟಿತಗೊಳಿಸಿ, ಸಮಾಜ ಸೇವೆಯ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ ಬೆಳ್ಳಿಪ್ಪಾಡಿ ಗ್ರಾಮ ಸಮಿತಿ ಅಧಿಕೃತವಾಗಿ ರಚಿಸಲಾಯಿತು. ನೂತನ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಶ್ರೀ ಪದ್ಮಪ್ಪ ಪೂಜಾರಿ (ಪರನೀರು) ಹಾಗೂ ಕಾರ್ಯದರ್ಶಿಯಾಗಿ ಶ್ರೀ ಹರೀಶ್ (ಕಾಂಜಾಮೂಲೆ) ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ಸುಂದರ ಸಾಲಿಯಾನ್ (ಬರ್ಪದೆ), ಡೀಕಯ್ಯ ಪೂಜಾರಿ (ಕುಂಡಾಪು), ಶೇಖರ ಪೂಜಾರಿ (ಉದ್ದಡ್ಕ), ಲಕ್ಷ್ಮಣ ಪೂಜಾರಿ (ಕೊರಿಯಾ), ಅಶೋಕ್ ಪೂಜಾರಿ (ಅಂಕರಡ್ಕ ) ಹಾಗೂ ಭಾಸ್ಕರ ಪೂಜಾರಿ (ಕೊಡಿ) ಅವರನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಬಿಲ್ಲವ ಸಮಾಜದ ಏಕತೆ, ಸಂಘಟನೆ ಮತ್ತು ಸಮಾಜಸೇವೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಗ್ರಾಮ ಮಟ್ಟದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.

ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಅವರ ಅವಧಿಯಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ ಎಂದು ಶುಭ ಹಾರೈಸಲಾಗಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version