Connect with us

ಇತರ

Comming soon….!!! 2 ರಿಂದ 5ರವರೆಗೆ ಕಿಲ್ಲೆ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮ…. ‘ಪುತ್ತೂರು ಹಬ್ಬ’ – ಮಾವು, ಹಲಸು, ಸಸ್ಯ ಜಾತ್ರೆ ಹಾಗೂ ಫುಡ್ ಫೆಸ್ಟಿವಲ್‌

Published

on

​ಜುಲೈ 2 ರಿಂದ 5ರವರೆಗೆ ಕಿಲ್ಲೆ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು – ಮಕ್ಕಳಿಗಾಗಿ ವಿಶೇಷ ಫನ್ ಝೋನ್ ಆಕರ್ಷಣೆ ಪುತ್ತೂರು: ಸಾಮಾಜಿಕ ಸೇವಾ ಸಂಘಟನೆಯಾದ ಪುತ್ತೂರು ವಾರಿಯರ್ಸ್ ಹಾಗೂ ಸುದ್ದಿ ಅಡ್ವೆರ್ಟೈಸರ್ಸ್ ಇವರ ಸಹಯೋಗದಲ್ಲಿ, ಸ್ಪೂರ್ತಿ ಕ್ಯಾಟರಿಂಗ್ ಸರ್ವಿಸ್ ಮತ್ತು ಇವೆಂಟ್ ಆರ್ಗನೈಸರ್ ಅವರ ಸಹಕಾರದೊಂದಿಗೆ ಇದೇ ಮೊದಲ ಬಾರಿಗೆ “ಪುತ್ತೂರು ಹಬ್ಬ – ಮಾವು, ಹಲಸು, ಸಸ್ಯ ಜಾತ್ರೆ ಮತ್ತು ಫುಡ್ ಫೆಸ್ಟಿವಲ್ – 2026” ಅನ್ನು ಜುಲೈ 2, 3, 4 ಹಾಗೂ 5 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ.

 

ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಕೃಷಿ, ತೋಟಗಾರಿಕೆ, ಆಹಾರ ಸಂಸ್ಕೃತಿ ಹಾಗೂ ಮನರಂಜನೆಯನ್ನು ಒಂದೇ ವೇದಿಕೆಯಲ್ಲಿ ಅನುಭವಿಸುವ ಅಪೂರ್ವ ಅವಕಾಶ ಸಾರ್ವಜನಿಕರಿಗೆ ದೊರೆಯಲಿದೆ.

ಪುತ್ತೂರು ಹಬ್ಬದಲ್ಲಿ ವಿವಿಧ ತಳಿಯ ಮಾವು ಹಾಗೂ ಹಲಸಿನ ಹಣ್ಣುಗಳು, ಅಪರೂಪದ ಸಸ್ಯಗಳು, ಹೂಗಿಡಗಳು, ಅಲಂಕಾರಿಕ ಗಿಡಗಳು, ಹಣ್ಣಿನ ಗಿಡಗಳು, ಮನೆ ತೋಟಕ್ಕೆ ಅಗತ್ಯವಾದ ಸಸ್ಯಗಳು ಸೇರಿದಂತೆ ವೈವಿಧ್ಯಮಯ ಮಳಿಗೆಗಳು ಇರಲಿವೆ. ಇದರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಆಹಾರ ಮಳಿಗೆಗಳಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಖಾದ್ಯಗಳು, ಬೀದಿ ಆಹಾರಗಳು, ಸ್ಥಳೀಯ ವಿಶೇಷ ತಿನಿಸುಗಳು ಹಾಗೂ ವಿವಿಧ ರುಚಿಕರ ಆಹಾರ ಪದಾರ್ಥಗಳು ಲಭ್ಯವಾಗಲಿವೆ.

​ ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಮಕ್ಕಳಿಗಾಗಿ ವಿಶೇಷ “ಫನ್ ಝೋನ್” ಅನ್ನು ನಿರ್ಮಿಸಲಾಗಿದ್ದು, ವಿವಿಧ ಆಟೋಪಕರಣಗಳು, ಮನರಂಜನಾ ಚಟುವಟಿಕೆಗಳು ಹಾಗೂ ಮಕ್ಕಳಿಗೆ ಸಂತಸ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೀಗಾಗಿ ಇಡೀ ಕುಟುಂಬದವರು ಒಂದೇ ಸ್ಥಳದಲ್ಲಿ ಶಾಪಿಂಗ್, ಆಹಾರ ಸವಿಯುವಿಕೆ ಹಾಗೂ ಮಕ್ಕಳ ಮನರಂಜನೆಯನ್ನು ಆನಂದಿಸಬಹುದಾಗಿದೆ.
ಸ್ಥಳೀಯ ಕೃಷಿಕರು, ನರ್ಸರಿ ಮಾಲೀಕರು, ಸ್ವಸಹಾಯ ಸಂಘಗಳು, ಮಹಿಳಾ ಉದ್ಯಮಿಗಳು, ಆಹಾರ ತಯಾರಕರು ಹಾಗೂ ವಿವಿಧ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಈ ಉತ್ಸವ ಉತ್ತಮ ವೇದಿಕೆಯಾಗಲಿದೆ. ನೂರಕ್ಕೂ ಅಧಿಕ ಮಳಿಗೆಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸಾವಿರಾರು ಮಂದಿ ಸಾರ್ವಜನಿಕರು ಉತ್ಸವಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಜಿಲ್ಲೆಯ ಜನತೆಗೆ ಗುಣಮಟ್ಟದ ಉತ್ಪನ್ನಗಳು, ಉತ್ತಮ ಆಹಾರ, ಕೃಷಿ ಹಾಗೂ ತೋಟಗಾರಿಕೆ ಮಾಹಿತಿಯೊಂದಿಗೆ ಕುಟುಂಬ ಸಮೇತರಾಗಿ ಸಮಯ ಕಳೆಯಲು ಈ ಉತ್ಸವವು ಅತ್ಯುತ್ತಮ ಅವಕಾಶವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಮಳಿಗೆ ಬುಕ್ಕಿಂಗ್‌ಗೆ 8050294039 ಹಾಗೂ 9901660440 ಸಂಖ್ಯೆಯನ್ನು ಸಂಪರ್ಕಿಸಬಹುದು. ಎಲ್ಲಾ ಸಾರ್ವಜನಿಕರು, ರೈತರು, ಸಸ್ಯಪ್ರಿಯರು, ಆಹಾರಪ್ರಿಯರು ಹಾಗೂ ಕುಟುಂಬ ಸಮೇತರಾಗಿ ಆಗಮಿಸಿ “ಪುತ್ತೂರು ಹಬ್ಬ”ವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version