ವಿಟ್ಲ :ನ 01,ಪುಷ್ಪಾ ನಾರಾಯಣ ಪೂಜಾರಿ ಬದಿಗುಡ್ಡೆ ಇವರ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ಮತ್ತು ಮಗಳಾದ ಸ್ನಿಗ್ದ ಇವರ ಹುಟ್ಟುಹಬ್ಬ ಕಾರ್ಯಕ್ರಮವು ಭಾರತ್ ಆಡಿಟೋರಿಯಂ ಚಂದಳಿಕೆ, ವಿಟ್ಲ ದಲ್ಲಿ 1.11.2026ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ 71ನೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾರತ್ ಆಡಿಟೋರಿಯಂ ಮಾಲಕರದ ಸಂಜೀವ ಪೂಜಾರಿ ಇವರನ್ನು ನಾರಾಯಣ ಪೂಜಾರಿ ಬದಿಗುಡ್ಡೆ ಇವರ ನೇತೃತ್ವದಲ್ಲಿ ಗೆಳೆಯ ಬಳಗ ಬೇರಿಕೆ, ವಿಟ್ಲ ಮೂಡ್ನೂರು ಇದರ ಸದಸ್ಯರೊಂದಿಗೆ ಕನ್ನಡ ರಾಜ್ಯೋತ್ಸವದದ ದಿನವೇ ಗುರುತಿಸಿ ಸನ್ಮಾನಿಸಲಾಯಿತು.. ಬಂಧು ಮಿತ್ರರು ಶುಭ ಹಾರೈಸಿ ಆಶೀರ್ವಾದಿಸಿದರು.ಶ್ರೀ ಚಂದ್ರಶೇಖರ ಕೇಪುಳಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.