Connect with us

ಇತರ

ನಾಳೆ (ಅ26)ಬಿಲ್ಲವ ಬ್ರಿಗೇಡ್ (ರಿ) ಮಂಗಳೂರು ವತಿಯಿಂದ ದಿ. ಶ್ರೀ ಎಸ್. ಬಂಗಾರಪ್ಪನವರ 94ನೇ ಹುಟ್ಟುಹಬ್ಬದ ಅಂಗವಾಗಿ ಸೇವೆ ಮತ್ತು ಭಕ್ತಿಯ ಕಾರ್ಯಕ್ರಮ

Published

on

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ, ಬಡವರ ಪರವಾಗಿ ಧ್ವನಿ ಎತ್ತಿದ ಜನನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎಸ್. ಬಂಗಾರಪ್ಪನವರ 94ನೇ ಹುಟ್ಟುಹಬ್ಬದ ಪ್ರಯುಕ್ತ ಬಿಲ್ಲವ ಬ್ರಿಗೇಡ್ (ರಿ.) ಮಂಗಳೂರು ವತಿಯಿಂದ ಸಮಾಜಮುಖಿ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಶುಭ ಸಂದರ್ಭದಲ್ಲಿ ಮೊದಲಿಗೆ ದೇರಳಕಟ್ಟೆ ಬೆಲ್ಮದಲ್ಲಿರುವ ಸೇವಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿರುವ ಅನಾಥರಿಗೆ ಒಂದು ದಿನದ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮತ್ತು ಸೇವಾ ಮನೋಭಾವವನ್ನು ಮೆರೆಸಲಾಗುವುದು. ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಶ್ರೇಷ್ಠವಾದ ಸೇವೆಯಾಗಿದ್ದು, ಸಮಾಜದ ನಿರ್ಗತಿಕರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಈ ಕಾರ್ಯವು ಶ್ರೀ ಬಂಗಾರಪ್ಪನವರ ಸ್ಮರಣೆಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ. ತದನಂತರ, ಮಂಗಳೂರಿನ ಪ್ರಸಿದ್ಧ ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿಯಲ್ಲಿ ಶ್ರೀ ಬಂಗಾರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಗುರುಪೂಜೆ ಹಾಗೂ ಶಿವಪೂಜೆಯನ್ನು ಆಯೋಜಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮವು ಬಿಲ್ಲವ ಬ್ರಿಗೇಡ್‌ನ ನೇತೃತ್ವದಲ್ಲಿ ನಡೆಯಲಿದೆ. ಸೇವೆಯೇ ಧರ್ಮ, ಮಾನವೀಯತೆಯೇ ನಿಜವಾದ ಪೂಜೆ ಎಂಬ ಆಶಯದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಬನ್ನಿ, ಜನನಾಯಕ ಶ್ರೀ ಎಸ್. ಬಂಗಾರಪ್ಪನವರ ಜನ್ಮದಿನವನ್ನು ಸಮಾಜಸೇವೆ, ಮಾನವೀಯತೆ ಮತ್ತು ಧಾರ್ಮಿಕ ಶ್ರದ್ಧೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುಹುದು. ಸೇವೆ • ಸಮರ್ಪಣೆ • ಸಮಾಜದ ಏಳಿಗೆ ಬಿಲ್ಲವ ಬ್ರಿಗೇಡ್ (ರಿ.) ಕೇಂದ್ರೀಯ ಸಮಿತಿ ಮಂಗಳೂರು

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version