Connect with us

ಇತರ

ಕಂಬಳ ಅಂಗಳದ ಲೆಜೆಂಡ್ ‘ನಂದಳಿಕೆ ಪಾಂಡು’ ಇನ್ನಿಲ್ಲ | ಸತತ ಎರಡು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ| 23 ವರ್ಷಗಳ ಕಂಬಳದ ಪಯಣ ಅಂತ್ಯ

Published

on

ಕಂಬಳ ಅಂಗಳದಲ್ಲಿ ತನ್ನದೇ ಛಾಪು ಮೂಡಿಸಿದ್ದ ‘ನಂದಳಿಕೆ ಪಾಂಡು’ (23) ವಯೋಸಹಜ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೃತಪಟ್ಟಿದೆ. ಹಗ್ಗ ವಿಭಾಗದಲ್ಲಿ ವೇಗದ ಓಟಕ್ಕೆ ಹೆಸರಾಗಿದ್ದ ಪಾಂಡು ಜೂನಿಯರ್ ವಿಭಾಗದಲ್ಲಿ ಸತತ ಎರಡು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿತ್ತು. ಬಳಿಕ ಸೀನಿಯರ್ ವಿಭಾಗದಲ್ಲೂ ಹಲವು ಓಟಗಾರರೊಂದಿಗೆ ಪದಕಗಳ ಬೇಟೆ ನಡೆಸಿ ಕಂಬಳಾಭಿಮಾನಿಗಳ ಮನಗೆದ್ದಿತ್ತು.ಚೆನ್ನ, ಮೋಡೆ ಸೇರಿದಂತೆ ಕಂಬಳದ ದಿಗ್ಗಜ ಕೋಣಗಳೊಂದಿಗೆ ಓಡಿ ಗಮನ ಸೆಳೆದಿದ್ದ ಪಾಂಡು, ತನ್ನ ವಿಶೇಷ ಓಟದ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿತ್ತು. ಇದೀಗ ಪಾಂಡುವಿನ ಅಗಲಿಕೆಗೆ ಕಂಬಳ ಕ್ಷೇತ್ರದ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version