Connect with us

ಇತರ

ಬಾಲಕೃಷ್ಣ ರೈ ಪೊರ್ದಾಲ್ ಸತತ 4 ನೇ ಬಾರಿಗೆ 17ನೇ ವಯೋಮಾನದ ಬಾಲಕಿಯರ ಕರ್ನಾಟಕ ರಾಜ್ಯ ತಂಡದ ತರಬೇತುದಾರರಾಗಿ ಆಯ್ಕೆ

Published

on

70ನೇ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ ರಾಜ್ಯದ ಗೋರಖ್ ಪುರ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ಗೆ 17 ರ ವಯೋಮಾನದ ಬಾಲಕಿಯರ ಕಬಡ್ಡಿ ತಂಡಕ್ಕೆ ಬಾಲಕೃಷ್ಣ ರೈ ಪೊರ್ದಾಲ್ ಸತತ 4 ನೇ ಬಾರಿಗೆ ಕರ್ನಾಟಕ ರಾಜ್ಯ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಸಹ ಶಿಕ್ಷಕರಾಗಿರುವ ಇವರು 1000ಕ್ಕಿಂತ ಅಧಿಕ ಕಾರ್ಯಕ್ರಮದ ನಿರೂಪಣೆ, ಸಾಮಾನ್ಯ ಕಾರ್ಯಕ್ರಮದಿಂದ ಹಿಡಿದು ಮುಖ್ಯಮಂತ್ರಿಗಳ ವರೆಗಿನ ಕಾರ್ಯಕ್ರಮದ ನಿರೂಪಣೆ.ಡ್ರಗ್ಸ್ ಮುಕ್ತ ಯುವ ಸಮಾಜ ಎನ್ನುವ ವಿಷಯದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 250ಕ್ಕಿಂತ ಅಧಿಕ ಶಾಲಾ-ಕಾಲೇಜುಗಳಲ್ಲಿ ಉಚಿತ ತರಬೇತಿ ರಾಷ್ಟ್ರಮಟ್ಟದ ಕಬಡ್ಡಿ ತರಬೇತುದಾರರಾಗಿ ಇವರ ತರಬೇತಿಯಲ್ಲಿ ಶಾಲೆ 8 ಬಾರಿ ಜಿಲ್ಲಾಮಟ್ಟ, 5 ಬಾರಿ ವಿಭಾಗ ಮಟ್ಟ, 5 ಬಾರಿ ರಾಜ್ಯಮಟ್ಟ, ಸತತ 4ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸತತ 4ಬಾರಿ ಕರ್ನಾಟಕ ಕಬಡ್ಡಿ ತಂಡದ ತರಬೇತುದಾರರಾಗಿ

ರಾಷ್ಟ್ರಮಟ್ಟಕ್ಕೆ ಆಯ್ಕೆ,10ಕ್ಕಿಂತ ಅಧಿಕ ಮಕ್ಕಳು ಅಥ್ಲೆಟಿಕ್ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆ, ತ್ರೋಬಾಲ್ ಪಂದ್ಯಾಟದಲ್ಲಿ ಸತತ 4 ಬಾರಿ ಜಿಲ್ಲಾಮಟ್ಟಕ್ಕೆ ಆಯ್ಕೆ, ದ.ಕ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಸಂಘಟನೆ, ಪುತ್ತೂರು ತಾಲೂಕು ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಸಂಘಟನೆ, ರೋಟರಿ ಕ್ಲಬ್ / ಲಯನ್ಸ್ ಕ್ಲಬ್‌ ಗಳಲ್ಲಿ ಸೇವೆ, ಭಾರತ್ ಸೈಟ್ ಗೈಡ್ ಸಂಸ್ಥೆಯಲ್ಲಿ ಉತ್ತಮ ಸ್ಕೌಟರ್ ಆಗಿ ಸೇವೆ,50ಕ್ಕಿಂತ ಅಧಿಕ ಸಂಘ-ಸಂಸ್ಥೆಗಳಿಂದ ಸನ್ಮಾನ, ಗೌರವಾದರಗಳಿಗೆ ಭಾಜನರಾಗಿರುತ್ತಾರೆ.ಕಳೆದ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version