Connect with us

ಇತರ

ಅಶೋಕ ಜನಮನ– ಆರ್ಯಾಪು ಎಸ್ ಎಸ್ ಟಿ ಕಾಲನಿಯಲ್ಲಿ ಪ್ರಚಾರ ಸಭೆ

Published

on

ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಶಾಸಕ ಅಶೋಕ್ ರೈ ಅವರ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ ಅಶೋಕ ಜನಮನ ಕಾರ್ಯಕ್ರಮದ ಅಂಗವಾಗಿ ಆರ್ಯಾಪು (ಮರಿಕೆ) ಗ್ರಾಮದ ಎಸ್.ಎಸ್.ಟಿ. ಕಾಲೋನಿಯಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ ನಡೆಯಿತು.

ಈ‌ಸಂದರ್ಬಧಲ್ಲಿ‌ಮಾತನಾಡಿದ ಟ್ರಸ್ಟ್ನ ನಿಹಾಲ್ ಪಿ ಶೆಟ್ಟಿಯವರು ದೀಪಾವಳಿಯ ಸಂತೋಷವನ್ನು ಸಮಾಜದ ಪ್ರತಿಯೊಂದು ಕುಟುಂಬದೊಂದಿಗೆ ಹಂಚಿಕೊಳ್ಳುವ ಸದುದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಜನರೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆಯುವ ಹಾಗೂ ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟನ್ನು ಬಲಪಡಿಸುವ ಮಹತ್ವದ ಪ್ರಯತ್ನವಾಗಿದೆ.ಅಶೋಕ ಜನಮನ ಎನ್ನುವುದು ಕೇವಲ ಸೀರೆ ಮತ್ತು ತಟ್ಟೆಗಳನ್ನು ವಿತರಿಸುವ ಕಾರ್ಯಕ್ರಮವಲ್ಲ; ಪ್ರತಿಯೊಂದು ಕುಟುಂಬದೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ, ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಗೌರವ ನೀಡುವ ಆತ್ಮೀಯ ಪ್ರಯತ್ನವಾಗಿದೆ. ಈ ದೀಪಾವಳಿಯ ಬೆಳಕು ಪ್ರತಿಯೊಂದು ಮನೆಯಲ್ಲೂ ಸಂತೋಷವನ್ನು ಮೂಡಿಸಲಿ ಎಂಬುದೇ ನಮ್ಮ ಆಶಯ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಮುಂಬರುವ ಜನಮಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ‌ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟ್‌ನ ಸದಸ್ಯರಾದ ಮಹಾಬಲ ರೈ, ಟ್ರಸ್ಟ್‌ನ ಸದಸ್ಯರಾದ ದಾಮೋದರ ಬಂಡಾರ್ಕರ್, ಬಾಬು ಮರಿಕೆ, ಸದಾನಂದ ಶೆಟ್ಟಿ, ಗಿರೀಶ್ ರೈ, ಶುಭಾ ರೈ ಸೇರಿದಂತೆ ಗ್ರಾಮದ ಹಲವು ಪ್ರಮುಖರು ಹಾಗೂ ಗಣ್ಯರು ಭಾಗವಹಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version