Published
8 hours agoon
By
Akkare News
ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಹಂತದಲ್ಲಿರುವಾಗಲೇ ರಾಜ್ಯದಲ್ಲೇ ಮೊದಲ ಬಾರಿ ಎಂಬಂತೆ ಬ್ಲಾಕ್ ಅಧ್ಯಕ್ಷರುಗಳಿಗೆ ವಾಹನವೊಂದನ್ನು ಒದಗಿಸಲಾಗಿದ್ದು ಇದು ಪಕ್ಷದ ಬೆಳವಣಿಗೆಗೆ ಮತ್ತು ಸಂಘಟನೆಗೆ ಬಳಕೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರಿಗೆ ಬಂದಿರುವ ಬೊಲೆರೋ ವಾಹನವನ್ನು ಬ್ಲಾಕ್ ಕಾಂಗ್ರೆಸ್ ವಾಹನ ಎಂದು ನಾಮಕರಣ ಮಾಡುವ ಮೂಲಕ ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಹಾಗೂ ವಿಟ್ಲ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರಿಗೆ ವಾಹನದ ಕೀಯನ್ನು ಶಾಸಕರು ಹಸ್ತಾಂತರ ಮಾಡಿದರು.
ಪಕ್ಷ ಚಟುವಟಿಕೆಗೆ ಪೂರಕವಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಲಾಕ್ ಕಾಂಗ್ರೆಸ್‌ಗೆ ವಾಹನವೊಂದು ಬಂದಿದೆ. ಇವತ್ತು ಕಾಂಗ್ರೆಸ್‌ಗೆ ಶುಭದಿನವಾಗಿದೆ. ಒಂದು ಕಡೆ ಪಕ್ಷದ ಭವನ ನಿರ್ಮಣವಾಗುತ್ತಿದೆ. ಇನ್ನೊಂದೆಡೆ ಪಕ್ಷದ ಶಾಸಕರು ಸಮರೋಪಾದಿಯಲ್ಲಿ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನಷ್ಟು ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಈ ವಾಹನ ಬಳಕೆಯಾಗಲಿ. ಮೂರು ಬ್ಲಾಕ್‌ಗಳಿಗೂ ಈ ವಾಹನ ಸದ್ಬಳಕೆಯಾಗಲಿ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಧರ್ ರೈ ಮಟಂತಬೆಟ್ಟು ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ, ಉದ್ಯಮಿ ಸಿಯಾನ್ ದರ್ಬೆ, ವಿಕ್ರಂ ರೈ ಸಾಂತ್ಯ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.