Connect with us

ಇತರ

ಪುತ್ತೂರು: ಪರವಾನಿಗೆಯಿಲ್ಲದೆ ಗೋ ಸಾಗಾಟ, ವಾಹನ,ಓರ್ವ ವ್ಯಕ್ತಿ ವಶಕ್ಕೆ

Published

on

ಪುತ್ತೂರು: ಪರವಾನಿಗೆಯಿಲ್ಲದೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದ ಸಂಪ್ಯ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಮೂರು ಹಸುಗಳನ್ನು ರಕ್ಷಣೆ ಮಾಡಿರುವ ನ.15 ರ ರಾತ್ರಿ ಮಾಡೂರು ಗ್ರಾಮದ ಈಶ್ವರಮಂಗಲದಲ್ಲಿ ನಡೆದಿದೆ. ಈಶ್ವರಮಂಗಲದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ತಮಿಳುನಾಡು ನೋಂದಣಿಯ ಅಶೋಕ್‌ ಲೇಲ್ಯಾಂಡ್‌ ಟೆಂಪೋದಲ್ಲಿ ಮೂರು ಹಸುಗಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ವಿಚಾರಿಸಿದಾಗ ಗೋವುಗಳ ಸಾಗಾಟಕ್ಕೆ ಯಾವುದೇ ಪರವಾನಿಗೆ ಇಲ್ಲದಿರುವುದು ಕಂಡು ಬಂದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಮೂರು ಹಸುಗಳ ರಕ್ಷಣೆ ಮಾಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version