Connect with us

ಇತರ

ಅಶೋಕ್ ಜನಮನ 2026 : ಪುತ್ತೂರಿನಲ್ಲಿ ಅದೂರಿ ‘ಅಶೋಕ ಜನಮನ-2026 ಸಂಭ್ರಮಕ್ಕೆ ಕ್ಷಣಗಣನೆ ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಸಹಿತ ರಾಜಕೀಯ, ಧಾರ್ಮಿಕ ಗಣ್ಯರ ಸಮಾಗಮ

Published

on

ಪುತ್ತೂರು: ದೀಪಾವಳಿಯ ಸಂಭ್ರಮವನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳುವ ಮೂಲಕ ಸೇವೆ, ಸಹಕಾರ ಹಾಗೂ ಮಾನವೀಯತೆಯ ಸಂದೇಶ ಸಾರುತ್ತಿರುವ ಪುತ್ತೂರಿನ ಹೆಮ್ಮೆಯ ‘ಅಶೋಕ ಜನಮನ-2026 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಶಾಸಕ ಅಶೋಕ್‌ ಕುಮಾ‌ರ್ ರೈ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಬೃಹತ್ ಜನಸೇವಾ ಕಾರ್ಯಕ್ರಮ ನ.22ರಂದು (ರವಿವಾರ) ಬೆಳಿಗ್ಗೆ 9 ಗಂಟೆಯಿಂದ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸುಮಾರು ಒಂದು ಲಕ್ಷ ಜನರಿಗೆ ದೀಪಾವಳಿ ಉಡುಗೊರೆ ವಿತರಿಸುವ ಬೃಹತ್ ಸಂಕಲ್ಪದೊಂದಿಗೆ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಸುಮಾರು ₹4 ಕೋಟಿ ವೆಚ್ಚ ಮಾಡಲಾಗುತ್ತಿದೆ. ಉಡುಗೊರೆ ವಿತರಣೆ ಮಾತ್ರವಲ್ಲದೆ, ಬೃಹತ್ ಅನ್ನದಾನ, ದೋಸೆ ಮೇಳ ಸೇರಿದಂತೆ ಹಲವು ವಿಶೇಷ ವ್ಯವಸ್ಥೆಗಳು ಈ ಬಾರಿಯ ಜನಮನದ ಆಕರ್ಷಣೆಯಾಗಲಿವೆ. ಪುತ್ತೂರು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದಲೂ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಕೊಂಬೆಟ್ಟು ಕ್ರೀಡಾಂಗಣ ಜನಸಾಗರಕ್ಕೆ ಸಾಕ್ಷಿಯಾಗಲಿದೆ.14 ವರ್ಷಗಳ ಜನಸೇವೆಯ ಪಯಣ: ಜನಮನದಲ್ಲಿ ವಿಶೇಷ ಸ್ಥಾನ! ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಮಾಜದ ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರೊಂದಿಗೆ ಹಬ್ಬದ ಸಂತೋಷ ಹಂಚಿಕೊಳ್ಳುವ ಆಶಯದೊಂದಿಗೆ ಆರಂಭಗೊಂಡ ‘ಅಶೋಕ ಜನಮನ’ ಇಂದು ಪುತ್ತೂರಿನ ಪ್ರಮುಖ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಕಳೆದ 14 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿ ಹಾಗೂ ಜನಪ್ರಿಯತೆಯನ್ನು ವಿಸ್ತರಿಸಿಕೊಂಡಿದೆ. ರಾಜಕೀಯ, ಜಾತಿ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಗೊರೆ ಪಡೆದುಕೊಳ್ಳುವ ಮುಕ್ತ ಅವಕಾಶ ಇದರ ವಿಶೇಷತೆಯಾಗಿದೆ

ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಉದ್ಯಮದ ಮೂಲಕ ಗಳಿಸಿದ ಸಂಪನ್ಮೂಲದ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಉದ್ದೇಶದಿಂದ ಈ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಅಶೋಕ ಜನಮನ ಕೇವಲ ಉಡುಗೊರೆ ವಿತರಣಾ ಕಾರ್ಯಕ್ರಮವಾಗಿ ಉಳಿಯದೆ, ಜನರೊಂದಿಗೆ ಬೆರೆಯುವ ಮತ್ತು ಹಬ್ಬದ ಸಂತೋಷವನ್ನು ಹಂಚಿಕೊಳ್ಳುವ ಬೃಹತ್ ವೇದಿಕೆಯಾಗಿ ರೂಪುಗೊಂಡಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version