Connect with us

ಇತ್ತೀಚಿನ ಸುದ್ದಿಗಳು

ನಾಳೆ (ನ.22) ಪುತ್ತೂರಲ್ಲಿ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣೆ ಗೂಡುದೀಪ ಸ್ಪರ್ಧೆ 10 ಜನ ಸಾಧಕರಿಗೆ ಸನ್ಮಾನ

Published

on

ಪುತ್ತೂರು: ಶಾಸಕ ಅಶೋಕ್‌ ಕುಮಾ‌ರ್ ರೈ ಮುಖ್ಯ ಪ್ರವರ್ತಕರಾಗಿರುವ ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನಿಂದ ದೀಪಾವಳಿಯ ಅಂಗವಾಗಿ ‘ಅಶೋಕ ಜನ-ಮನ’ 14ನೇ ವರ್ಷದ ವಸ್ತ್ರ ವಿತರಣಾ ಕಾರ್ಯಕ್ರಮ ನಾಳೆ (ನ.22) ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಅತಿಥಿಗಳು ಬರುವ ತನಕ ಕಾಯದೆ ಬೆಳಿಗ್ಗೆ 10 ಗಂಟೆಗೆ ವಸ್ತ್ರ ವಿತರಣೆ ನಡೆಯಲಿದೆ. ಬೆಳಿಗ್ಗೆ ದೋಸೆ, ಮಧ್ಯಾಹ್ನ ಊಟ, ಸಂಜೆ ದೋಸೆ, ಎಷ್ಟೇ ಜನರು ಬಂದರೂ ವಸ್ತ್ರ ವಿತರಣೆ, ಮಕ್ಕಳಿಗೆ ಗೂಡುದೀಪ ಸ್ಪರ್ಧೆ, 10 ಜನ ಬಡ ಸಾಧಕರಿಗೆ ಸನ್ಮಾನ ನಡೆಯಲಿದೆ. ಬಟ್ಟಲು, ಸೀರೆ, ಬೆಡ್ ಶೀಟ್‌ಗೆ ಪ್ರತ್ಯೇಕ ಕೌಂಟರ್ ಇರಲಿದೆ. ಒಂದು ಕೌಂಟರ್‌ನಲ್ಲಿ ಒಂದು ವಸ್ತು ಮಾತ್ರ ವಿತರಿಸಲಾಗುತ್ತದೆ. ಕೈ ಬೆರಳಿಗೆ ಶಾಯಿ ಗುರುತು ಹಾಕಲಾಗುತ್ತಿದ್ದು, ಒಂದು ಕೌಂಟರ್‌ನಲ್ಲಿ ಪಡೆದವರು ಇನ್ನೊಂದು ಕೌಂಟರ್‌ನಲ್ಲಿ ಪಡೆಯಲು ಸಾಧ್ಯವಿಲ್ಲ. ಜನ ಒಂದೆಡೆ ಸೇರಿ ಗೊಂದಲವಾಗುವುದನ್ನು ತಪ್ಪಿಸಲು ದೊಡ್ಡದಾದ ಸರತಿ ಸಾಲು ಮಾಡಲಾಗುವುದು. ಬಟ್ಟಲು ಜೊತೆಗೆ ಬೆಡ್‌ಶೀಟ್‌ ನೀಡಲಾಗುವುದು. ಈ ಬಾರಿ ಗುಣಮಟ್ಟದ ಸೀರೆ, ಬೆಡ್‌ಶೀಟ್‌ಗಳನ್ನೇ ವಿತರಿಸಲಾಗುವುದು. ಎರಡು ವರ್ಷ ಗ್ಯಾರಂಟಿಯಿದೆ.

 ಕಳೆದ ಬಾರಿಯಂತೆ ಗೂಡುದೀಪ ಸ್ಪರ್ಧೆ, ಹತ್ತು ಜನ ಬಡ ಸಾಧಕರಿಗೆ ಸನ್ಮಾನ ನಡೆಯಲಿದೆ. ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕುಗೊಳಿಸಿ ಸಂಗೀತ ರಸಮಂಜರಿ ಮಾತ್ರ ನಡೆಸಲಾಗುವುದು ಎಂದು ಶಾಸಕ ಅಶೋಕ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆಯಿಂದಲೇ ದೋಸೆ ವಿತರಣೆ:
ಊಟ, ಉಪಹಾರದ ಬಗ್ಗೆ ಮಾಹಿತಿ ನೀಡಿದ ಅಶೋಕ್‌ ರೈಯವರು ಕಾರ್ಯಕ್ರಮದಲ್ಲಿ ಊಟ, ಉಪಹಾರಗಳನ್ನು ನೀಡಲಾಗುತ್ತಿದ್ದು ಈ ಬಾರಿ ಬೆಳಿಗ್ಗೆ 10 ಗಂಟೆಗೆ ದೋಸೆ ವಿತರಣೆ ಪ್ರಾರಂಭಗೊಳ್ಳಲಿದೆ. 11.30ಕ್ಕೆ ಅನ್ನದಾನ ಪ್ರಾರಂಭಗೊಂಡು 3 ಗಂಟೆಯ ತನಕ ಅನ್ನದಾನ ನಡೆದ ನಂತರ ಮತ್ತೆ ದೋಸೆ ವಿತರಣೆ ಪ್ರಾರಂಭಗೊಳ್ಳಲಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version