Connect with us

ಇತ್ತೀಚಿನ ಸುದ್ದಿಗಳು

ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರತಿಭೋದ್ದೀಪನಂ ಶಿಕ್ಷಣ ಮತ್ತು ಮೌಲ್ಯಗಳು ಸಾಧನೆಯ ಕನಸಿಗೆ ಅಡಿಗಲ್ಲಾಗಲಿ: ರಿಕಿತಾ ಪಾಯ್ಸ್

Published

on

ವಿದ್ಯಾರ್ಥಿ ಜೀವನವೆನ್ನುವುದು ನಮ್ಮ ಬದುಕಿನ ಸುವರ್ಣ ಯುಗ. ವಿದ್ಯಾರ್ಥಿಗಳ ಎಲ್ಲಾ ಕನಸುಗಳಿಗೂ ಶಕ್ತಿಯನ್ನು ಪಡೆದುಕೊಳ್ಳುವ ಸಮಯವಿದು. ಉತ್ತಮವಾದ ಶಿಕ್ಷಣ ಮತ್ತು ಮೌಲ್ಯ ಬದ್ಧವಾದ ನಡವಳಿಕೆಗಳು ನಮ್ಮ ಸಾಧನೆಯ ಕನಸನ್ನು ಸಶಕ್ತಗೊಳಿಸುತ್ತವೆ. ನಾವು ಪಡೆದುಕೊಳ್ಳುವ ಮೌಲ್ಯಗಳು ನಮ್ಮ ಮುಂದಿನ ಜೀವನದುದ್ದಕ್ಕೂ ನಮಗೆ ದಾರಿದೀಪವಾಗಿ ನಿಲ್ಲುತ್ತವೆ” ಎಂದು ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮಂಗಳೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರಿಕಿತಾ ಪಾಯ್ಸ್ ನುಡಿದರು. ಕೊಂಬೆಟ್ಟು ಪ್ರೌಢಶಾಲೆಯಲ್ಲಿ ದಿನಾಂಕ 14. 11. 2026 ರಂದು ನಡೆದ ಮಕ್ಕಳ ದಿನಾಚರಣೆ ಪ್ರತಿಭೋದ್ದೀಪನಂ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡುತ್ತಾ ಮಾತನಾಡಿದರು. ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮವನ್ನು ಸಂಸ್ಥೆಯ ನಿವೃತ್ತ ಉಪಪ್ರಾಂಶುಪಾಲರಾದ ವಸಂತ ಮೂಲ್ಯ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ ರಾವ್ ಎಸ್. ಇವರು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇದರ ಪ್ರಾಂಶುಪಾಲರಾದ ಗೋಪಾಲಗೌಡ ಕೆ., ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇಲ್ಲಿನ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಬಾಲಕೃಷ್ಣ ಗೌಡ ಬಿ.ಟಿ., ಅನಿಲ್ ಪಾಯ್ಸ್, ರಮೇಶ್, ದರ್ಣಪ್ಪ ನಾಯ್ಕ್, ಪ್ರಾಣೇಶ್, ಸುಚರಿತಾ, ವಂದನಾ, ತನುಜಾ ಹಾಗೂ ಶಾಲಾ ವಿದ್ಯಾರ್ಥಿ ನಾಯಕರಾದ ತೀರ್ಥೇಶ್ ಮತ್ತು ಪಾಯಲ್ ಉಪಸ್ಥಿತರಿದ್ದರು.

 

ವಿದ್ಯಾರ್ಥಿಗಳ ಪೂಜಾ ನೃತ್ಯ ಹಾಗೂ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರ ಉಪ ಪ್ರಾಂಶುಪಾಲರಾದ ನಾಗರಾಜ ಭಟ್ ಪಿ. ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ವರದಿಯನ್ನು ವಾಚಿಸಿದರು. ಶಾಲಾ ಹಿರಿಯ ಶಿಕ್ಷಕ ಶ್ರೀ ಗ್ರೆಗೊರಿ ರೋನಿ ಪಾಯ್ಸ್ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಮಮತಾ ರೈ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಜೀವಿತಾ, ತೃಷ್ಯಾ, ಲಿಪಿಕ, ಮನ್ವಿತ್, ಭಾವನ ಹಾಗೂ ರಾಷ್ಟ್ರಮಟ್ಟದ ಕರಾಟೆ ಪ್ರತಿಭೆ ಭವಿಷ್ ಇವರುಗಳನ್ನು ಅಭಿನಂದಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಸುಮಾರು 40 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಿಕ್ಷಕರಾದ ಶ್ರೀಮತಿ ಶೋಭಾ, ಶ್ರೀಮತಿ ಅಮಿತಾ, ಶ್ರೀಮತಿ ಪ್ರಸನ್ನ ಕುಮಾರಿ, ಶ್ರೀಮತಿ ಗೀತಾಂಜಲಿ ಬಹುಮಾನಿತ ವಿದ್ಯಾರ್ಥಿಗಳ ಪಟ್ಟಿಗಳನ್ನು ವಾಚಿಸಿದರು.

ಶಿಕ್ಷಕರಾದ ಮರ್ಸಿ ಮಮತಾ ಮೋನಿಸ್, ಮಧುರಾ, ರೆನಿಟಾ ಸುಷ್ಮಾ, ಯುಜಿನಾ, ಜಗನ್ನಾಥ ಅರಿಯಡ್ಕ, ಮೋಹಿನಿ ಬಿ.ಟಿ., ರಶ್ಮಿ ಟಿ.ಎಂ., ಸೌಮ್ಯಲಕ್ಷ್ಮಿ, ಪಲ್ಲವಿ, ಭಾರತಿ, ಕುಸುಮಾವತಿ ಆಶ್ಲೇಷ್ ಕುಮಾರ್, ಶಶಿಕುಮಾರ್ , ವಿದ್ಯಾರ್ಥಿಗಳಾದ ಮನ್ವಿತ್ ಹಾಗೂ ದಿಶಾ ಬಿ.ಕೆ ಅತಿಥಿಗಳಿಗೆ ಪುಷ್ಪ ಹಾಗೂ ಶಾಲು ನೀಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಪರಿಚಾರಕರಾಗಿರುವ ಹರೀಶ್ ಇವರನ್ನು ಅಭಿನಂದಿಸಲಾಯಿತು. ಕಚೇರಿ ಸಿಬ್ಬಂದಿಗಳಾದ ರಶ್ಮಿ ,ರೇಷ್ಮಾ ,ಸುಂದರ ಹಾಗೂ ಅಡುಗೆ ಸಿಬ್ಬಂದಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಅಪರಾಹ್ನದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಕ್ಷಕಿ ಮರ್ಸಿ ಮಮತಾ ಮೋನಿಸ್ ಹಾಗೂ ಸೌಮ್ಯ ಲಕ್ಷ್ಮಿ ಮತ್ತು ವಿದ್ಯಾರ್ಥಿಗಳು ನಿರ್ವಹಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version