Connect with us

ಇತ್ತೀಚಿನ ಸುದ್ದಿಗಳು

ಪುತ್ತೂರಿನಲ್ಲಿ (ಇಂದು ಅ.31) ರಂದು ವಿದ್ಯುತ್ ವ್ಯತ್ಯಯ – ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಕರೆಂಟ್ ಇರಲ್ಲ!

Published

on

ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗ ಬದಲಾವಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಅಕ್ಟೋಬರ್ 31ರಂದು ಪುತ್ತೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

110/33/11 ಕೆ.ವಿ. ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಡ್ ಹಾಗೂ ವಾಟರ್ ಸಪ್ಪೆ ಫೀಡರ್‌ಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ವಾಟರ್ ಸಪ್ಪೆ, ದರ್ಬೆ, ಕೆಎಸ್‌ಆರ್‌ಟಿಸಿ, ನೆಲ್ಲಿಕಟ್ಟೆ, ಕಲ್ಲಾರೆ, ಸಾಮೆತ್ತಡ್ಕ, ಹನುಮಾನ್ ಮಿಲ್, ಅಶ್ವಿನಿ ಸರ್ಕಲ್, ಐಬಿ, ಎಂ.ಟಿ. ರಸ್ತೆ, ಕೋರ್ಟ್ ರಸ್ತೆ, ಬೊಳ್ಳಾರು, ಬೈಪಾಸ್, ಬೀರಮಲೆ, ಪರ್ಲಡ್ಕ ಹಾಗೂ ಮಿನಿ ವಿಧಾನಸೌಧ ಪರಿಸರದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಆದ್ದರಿಂದ ಸಂಬಂಧಪಟ್ಟ ಪ್ರದೇಶಗಳ ವಿದ್ಯುತ್ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version