Published
7 hours agoon
By
Akkare News
ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡಿದ ನ್ಯಾಯವಾದಿಗಳು ಹಾಗೂ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಅ.10ರಂದು ಗೌರವ ಅಭಿನಂದನಾ ಸಭೆ ಮತ್ತು ಸೌಜನ್ಯ ಪರ ನ್ಯಾಯದ ಹೋರಾಟಗಾರರ ಸಹಭಾಗಿತ್ವದಲ್ಲಿ ನ್ಯಾಯದ ನಡಿಗೆ ಮೆರವಣಿಗೆ ನಡೆಯಿತು.ಬೆಳಗ್ಗೆ 11 ಗಂಟೆಗೆ ಉಜಿರೆಯ ಕುಂಜರ್ಪದಿಂದ ಆರಂಭವಾದ ಮೌನ ಮೆರವಣಿಗೆ ಬೆಳ್ತಂಗಡಿ ಮುಖ್ಯ ರಸ್ತೆಯ ಮೂಲಕ ಸಾಗಿ ತಾಲೂಕು ಕ್ರೀಡಾಂಗಣ ತಲುಪಿತು.