Connect with us

ಕ್ರೀಡೆ

ಟೀಮ್ ಇಂಡಿಯಾ ಆಯ್ಕೆಗಾರರು ಸಿರಾಜ್ ನಿಜವಾದ ಪಾತ್ರವನ್ನೇ ಮರೆತುಬಿಟ್ಟಿದ್ದಾರೆ: ಆರ್‌ಸಿಬಿ ಮಾಜಿ ಸ್ಟಾರ್ ಎಬಿಡಿ

Published

on

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. 2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ರೇಸ್‌ನಲ್ಲಿ ಟೀಮ್ ಇಂಡಿಯಾಗೆ ಈ ಗೆಲುವು ಅತ್ಯಂತ ನಿರ್ಣಾಯಕವಾಗಿತ್ತು. ಈ ಕುರಿತು ಭಾರಿ ಟೀಕೆಗಳು ವ್ಯಕ್ತವಾಗುತ್ತಲಿವೆ. ಇದರ ಬೆನ್ನಲ್ಲೇ ಇದೀಗ ಆರ್‌ಸಿಬಿ ಮಾಜಿ ಸ್ಟಾರ್ ಆಟಗಾರ ಕೂಡ ಖಡಕ್ ಸಂದೇಶ ನೀಡಿದ್ದಾರೆ. ಪಂದ್ಯ ಡ್ರಾ ಆದ ಬೆನ್ನಲ್ಲೇ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟ ನಾಯಕ ಶುಭ್‌ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರದ ವಿರುದ್ಧ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ದಿಗ್ಗಜ ಎಬಿ ಡಿವಿಲಿಯರ್ಸ್ ಕೂಡ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಸಿರಾಜ್ ಪಾತ್ರವನ್ನು ಮರೆತ ಆಯ್ಕೆಗಾರರು: ಎಬಿಡಿ ಅಸಮಾಧಾನ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ಮಾತನಾಡಿರುವ ಎಬಿ ಡಿವಿಲಿಯರ್ಸ್, ಆರ್‌ಸಿಬಿ ತಂಡದಲ್ಲಿ ಸಿರಾಜ್ ಅವರೊಂದಿಗೆ ದೀರ್ಘಕಾಲ ಆಡಿದ ಅನುಭವವನ್ನು ಸ್ಮರಿಸಿಕೊಂಡಿದ್ದಾರೆ. ‘ಸಿರಾಜ್ ಅವರ ಇತ್ತೀಚಿನ ಅಂಕಿಅಂಶಗಳು ಅಷ್ಟೇನೂ ಆಕರ್ಷಕವಾಗಿಲ್ಲದಿರಬಹುದು ಮತ್ತು ಅವರು ಸದ್ಯ ಫಾರ್ಮ್ ಕಳೆದುಕೊಂಡಿರಬಹುದು. ಆದರೆ ಭಾರತ ತಂಡದಲ್ಲಿ ಅವರು ನಿಭಾಯಿಸುವ ಪಾತ್ರ ಅತ್ಯಂತ ಅಮೂಲ್ಯವಾದುದು. ಈ ನಿರ್ಧಾರ ತೆಗೆದುಕೊಂಡ ಕೋಚ್ ಅಥವಾ ಆಯ್ಕೆಗಾರರು ತಂಡದಲ್ಲಿ ಸಿರಾಜ್ ಅವರ ನಿಜವಾದ ಪಾತ್ರವನ್ನೇ ಮರೆತುಬಿಟ್ಟಿದ್ದಾರೆ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಓರ್ವ ದಣಿವರಿಯದ ಬೌಲರ್ ಆಗಿದ್ದು, ಅವರ ನಿರಂತರ ದಾಳಿಯಿಂದಾಗಿಯೇ ಜಸ್ಪ್ರೀತ್ ಬುಮ್ರಾ ಮತ್ತು ಇತರ ವೇಗಿಗಳಿಗೆ ಮುಕ್ತವಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version