Connect with us

ಕ್ರೀಡೆ

ಕರಾಟೆ ಪಂದ್ಯಾಟದಲ್ಲಿ ಸಾಂದೀಪನಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ :

Published

on

ವಿದ್ಯಾ ಭಾರತಿ ಇದರ ಆಶ್ರಯದಲ್ಲಿ ಶ್ರೀ ದೇವಿ ವಿದ್ಯಾಲಯ ಪುಣಚ ಇಲ್ಲಿ ಜರುಗಿದ ಪುತ್ತೂರು ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ 17ರ ವಯೋಮಾನದ ಹುಡುಗರ ವಿಭಾಗದಲ್ಲಿ ಜೀವನ್ 10ನೇ ತರಗತಿ ಪ್ರಥಮ ಸ್ಥಾನ, ನಿಶಾಂತ್ ಸಿ ಜಿ 10ನೇ ತರಗತಿ ತೃತೀಯ ಸ್ಥಾನ, ವರ್ಷಿತ್ 10ನೇ ತರಗತಿ ತೃತೀಯ ಸ್ಥಾನ, 17ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಜ್ಞಾನ ರೈ -10ನೇ ತರಗತಿ ಪ್ರಥಮ ಸ್ಥಾನ, ಭೂಮಿಕಾ -10ನೇ ತರಗತಿ ದ್ವಿತೀಯ ಸ್ಥಾನ, ಹಸ್ತಾ ಶೆಟ್ಟಿ -10ನೇ ತರಗತಿ ದ್ವಿತೀಯ ಸ್ಥಾನ, ಅಂಜನಾ 9ನೇ ತರಗತಿ ದ್ವಿತೀಯ ಸ್ಥಾನ, 14ರ ವಯೋಮಾನದ ಹುಡುಗರ ವಿಭಾಗ ದಲ್ಲಿ ಸಮೃದ್ಧ -8ನೇ ತರಗತಿ ದ್ವಿತೀಯ ಸ್ಥಾನ, ವಿಖ್ಯಾತ್ 6ನೇ ತರಗತಿ ತೃತೀಯ ಸ್ಥಾನ, 14ರ ವಯೋಮಾನದ ಹುಡುಗಿಯರ ವಿಭಾಗ ದಲ್ಲಿ ದ್ವಿತಿ ಕೆ ಎಂ -7ನೇ ತರಗತಿ ಪ್ರಥಮ ಸ್ಥಾನ, ಲಿಷ್ಮ -7ನೇ ತರಗತಿ ತೃತೀಯ ಸ್ಥಾನ, ಧನ್ವಿ ಬಿ -7ನೇ ತರಗತಿ ತೃತೀಯ ಸ್ಥಾನ ಪಡೆದಿರುತ್ತಾರೆ. ಜ್ಞಾನ ರೈ, ದ್ವಿತಿ ಕೆ ಎಂ, ಜೀವನ್ ಇವರುಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕರಾದ ಶ್ರೀ ನಾರಾಯಣ ಆಚಾರ್ಯ ತರಬೇತಿ ನೀಡಿದ್ದಾರೆ. ಇವರಿಗೆ ಶಾಲಾ ಅಧ್ಯಕ್ಷರಾದ ಶ್ರೀ ಎಸ್ ಜಯರಾಮ ಕೆದಿಲಾಯ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ತಿಳಿಸಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version