Published
6 hours agoon
By
Akkare News
ಪುತ್ತೂರು: ಇದ್ದಿಲು ಸಾಗಾಟ ಮಾಡುತ್ತಿದ್ದ ಲಾರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಹಾನಿಗೊಂಡ ಘಟನೆ ಸೆ.26ರ ರಾತ್ರಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸತ್ತಿಕಲ್ಲು ಎಂಬಲ್ಲಿ ನಡೆದಿದೆ.
ಲಾರಿಯಲ್ಲಿ ಇದ್ದಿಲು ಸಾಗಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಗೆ ಲಾರಿಯನ್ನು ಆವರಿಸಿತು. ಘಟನೆಯಿಂದ ಲಾರಿ ಬಹುತೇಕ ಸಂಪೂರ್ಣವಾಗಿ ಸುಟ್ಟು ಹಾನಿಗೊಂಡಿದೆ.