Connect with us

ನಿಧನ

ಕೋಡಿಂಬಾಡಿ ನಿವಾಸಿ ಧರ್ಮಸ್ಥಳದ ಮಾಜಿ ಉಗ್ರಾಣ ಸೂಪರ್‌ವೈಸರ್ ಶ್ರೀಧರ ಹೆಗಡೆ ಉಳಿಯ ಹೃದಯಘಾತದಿಂದ ನಿಧನ

Published

on

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಉಗ್ರಾಣ ಸೂಪರ್‌ವೈಸರ್ ಆಗಿ ನಿವೃತ್ತಗೊಂಡಿದ್ದ ಕಲ್ಲೇಗ ಮಾಡತ್ತಾರು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೋಡಿಂಬಾಡಿ ನಿವಾಸಿ ಶ್ರೀಧರ್ ಹೆಗಡೆ ಉಳಿಯ (61ವ) ಅವರು ನ.24ರಂದು ಹೃದಯಘಾತದಿಂದ ನಿಧನರಾದರು. ಶ್ರೀಧ‌ರ್ ಹೆಗಡೆ ಉಳಿಯ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಗ್ರಾಣ ಸೂಪರ್‌ವೈಸ‌ರ್, ಯಾತ್ರಿ ನಿವಾಸದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ ಕಳೆದೆರಡು ವರ್ಷಗಳ ಹಿಂದೆಯಷ್ಟೆ ನಿವೃತ್ತಿ ಹೊಂದಿದ್ದರು. ಇದರ ಜೊತೆಗೆ ಕಲ್ಲೇಗ ಮಾಡತ್ತಾರು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಗೀತಾ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version