ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ನಿವಾಸಿ ದೈವಗಳ ಹಿರಿಯ ಪರಿಚಾರಕರಾದ ಶೇಷಪ್ಪ ಮಡಿವಾಳ (75ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಮೇ 13ರಂದು ಸ್ವಗೃಹದಲ್ಲಿ ನಿಧನರಾದರು.
ಶೇಷಪ್ಪ ಮಡಿವಾಳ ಅವರು ಕಳೆದ 55 ವರ್ಷಗಳಿಂದ ವಿವಿಧ ಕಡೆಗಳಲ್ಲಿ ದೈವದ ಚಾಕರಿ ವರ್ಗದಲ್ಲಿ ಹಿರಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರ ಈ ಸುಧೀರ್ಘ ಕಾರ್ಯಕ್ಕೆ ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ದೇವಸ್ಥಾನ, ದೈವಸ್ಥಾನಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಮೃತರು ಪತ್ನಿ ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಮಡಿವಾಳ, ಮಕ್ಕಳಾದ ಲೋಕೇಶ್, ಹರೀಶ್, ನಿತೇಶ್, ಸೊಸೆಯಂದಿರಾದಸುಮಲತಾ ಲೋಕೇಶ್, ರಮ್ಯಾ ಹರೀಶ್ ,ಮೊಮ್ಮಗ ತನ್ವಿತ್‌ರವರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ವಿವಿಧ ದೇವಸ್ಥಾನದ, ದೈವಸ್ಥಾನಗಳ ಪ್ರಮುಖರು ಭೇಟಿ ನೀಡಿದರು.