ಪುತ್ತೂರು: ಸಾಲ್ಮರ ಶ್ರೀದುರ್ಗಾ ಲೈಟಿಂಗ್ಸ್ & ಸೌಂಡ್ಸ್ ಮಾಲಕ ಕೆ.ಕೃಷ್ಣಪ್ಪ(74ವ.)ರವರು ವಯೋಸಹಜ ಕಾಯಿಲೆಯಿಂದ ಮೇ.16 ರಂದು ಮುಂಜಾನೆ ನಸುಕಿನ ವೇಳೆ ನಿಧನ ಹೊಂದಿದ್ದಾರೆ.
ಕೆ.ಕೃಷ್ಣಪ್ಪರವರು ಶ್ರೀದುರ್ಗಾ ಲೈಟಿಂಗ್ಸ್ ಸೌಂಡ್ಸ್ ಅನ್ನು ಕಳೆದ 48 ವರ್ಷಗಳಿಂದ ಮುನ್ನೆಡೆಸುತ್ತಾ ಬಂದಿದ್ದು ತಮ್ಮ ವೃತ್ತಿಯಲ್ಲಿ ಹಾಗೂ ಸಾಮಾಜಿಕ ಜೀವನದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ ಚಂದ್ರಾವತಿ, ಪುತ್ರ ತಂದೆಯ ವೃತ್ತಿಯನ್ನು ಮುನ್ನಡೆಸುತ್ತಿರುವ ಪ್ರದೀಪ್ ಕೆ., ಸೊಸೆ ಮೋಶ್ಮಿ, ಓರ್ವ ಮೊಮ್ಮಗಳನ್ನು ಅಗಲಿದ್ದಾರೆ.