ಸವಣೂರು::ಆದರ್ಶ ಸೊಸೈಟಿಯ ಸವಣೂರು ಶಾಖೆ, ಕೇಂದ್ರ ಕಛೇರಿ ಹಾಗೂ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ – ಹಿರಿಯ ಸಹಕಾರಿ ಜಾಕೆ ಮಾಧವ ಗೌಡರಿಗೆ ಆದರ್ಶ ರಜತ ಪ್ರಶಸ್ತಿ ಪ್ರಧಾನ : “ಸೀತಾರಾಮ ರೈ ಅವರು ಸವಣೂರಿನ ರತ್ನ” – ಎಡನೀರು ಶ್ರೀ
ಆದರ್ಶ ಸಹಕಾರಿ ಸಂಘವು ಎಲ್ಲಾ ಇತರ ಸಂಘಗಳಿಗೆ ಆದರ್ಶವಾಗುವಂತೆ ಬೆಳೆದಿದೆ. 25 ವರ್ಷಗಳಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವುದು ಯಶಸ್ಸಿಗೆ ಕಾರಣ. ಸೀತಾರಾಮ ರೈ ಗಳು ಸವಣೂರಿನ ರತ್ನ. ಅವರ ಛಲ, ಶ್ರದ್ಧೆ, ಸೇವೆ ಸಹಕಾರಿ ಸಂಘವನ್ನು ಎತ್ತರಕ್ಕೆ ಬೆಳೆಸಿದೆ” ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಹೇಳಿದರು. ಅವರು ನ.16 ರಂದು ಸವಣೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಛೇರಿ ಕಟ್ಟಡ, ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಹಾಗೂ ರಜತ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ “ಪ್ರಾಮಾಣಿಕ ಪ್ರಯತ್ನ, ವಿಶ್ವಾಸ ಮತ್ತು ಶಿಸ್ತು ಅವರನ್ನು ಎತ್ತರಕ್ಕೆ ಬೆಳೆಸಿದೆ” ಎಂದರು. ಮಂಗಳೂರಿನ ಎ.ಜೆ. ಶೆಟ್ಟಿ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಚೇರ್ ಮ್ಯಾನ್ ಡಾ. ಎ.ಜೆ ಶೆಟ್ಟಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ “ರಜತ ಸಂಭ್ರಮದಲ್ಲಿರುವ ಸಹಕಾರಿ ಸಂಘ ಶೀಘ್ರ 25 ಶಾಖೆಗಳನ್ನು ಹೊಂದಲಿ. ಆ ಶಕ್ತಿಯನ್ನು ಸೀತಾರಾಮ ರೈಗಳಿಗೆ ದೇವರು ನೀಡಲಿ” ಎಂದರು. ಶಾಸಕಿ ಭಾಗೀರಥಿ ಮುರುಳ್ಯ ಅವರು ಸವಣೂರು ಶಾಖೆಯ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ “ಸೀತಾರಾಮ ರೈಗಳ ಸಂಘಟನಾತ್ಮಕ ಕೆಲಸ ಕಾರ್ಯ ಸಹಕಾರಿ ಸಂಘದ ಅಭಿವೃದ್ಧಿಗೆ ಕಾರಣವಾಗಿದೆ” ಎಂದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೂಟ್ಟು ಅವರು ಸಹಕಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ “ಸೀತಾರಾಮ ರೈಗಳು ನಮಗೆಲ್ಲಾ ಆದರ್ಶಪಾಯರು. ಅವರು ಮುಟ್ಟಿದ ಕೆಲಸ ಯಶಸ್ಸು, ಸೀತಾರಾಮ ರೈರವರು ಹಾಗೂ ರಾಜೇಂದ್ರ ಕುಮಾರ್ ಅವರು ಜೋಡೆತ್ತುಗಳಾಗಿ ಮಾಡಿದ ಕೆಲಸದಿಂದ ಸಹಕಾರಿ ಕ್ಷೇತ್ರ ಇಷ್ಟು ಎತ್ತರಕ್ಕೆ ಬೆಳೆದಿದೆ” ಎಂದರು. ರಜತ ಮಹೋತ್ಸವದ ಸವಿ ನೆನಪಿಗಾಗಿ ನಿರ್ಮಿಸಿದ ಸಾರ್ವಜನಿಕ ಬಸ್ಸು ನಿಲ್ದಾಣವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿ ಮಾತನಾಡಿ “ಹುಟ್ಟೂರಿನ ಮೇಲಿನ ಪ್ರೀತಿಯಿಂದ ಸವಣೂರನ್ನೇ ಸಹಕಾರಿ ಕಾಶಿಯನ್ನಾಗಿ ಮಾಡಿದ್ದಾರೆ. 50ನೇ ವರ್ಷಕ್ಕೆ ಆದರ್ಶ ಬ್ಯಾಂಕ್ ಆಗಲಿ” ಎಂದು ಹಾರೈಸಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ರಾಷ್ಟ್ರೀಕೃತ ಬ್ಯಾಂಕ್ ಗಳು ವಿಲೀನ ಆಗುತ್ತಿರುವ ಕಾಲದಲ್ಲಿ ಸಹಕಾರಿ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಬೆಳೆದಿದೆ. ಸಹಕಾರಿ ಸಂಘಗಳು ಸದಸ ಉತ್ತಮ ಸೇವೆ ನೀಡುತ್ತಿದೆ. ಬಡವರು ಮಹಿಳೆಯರು ಇಂದು ಸ್ವಾವಲಂಬಿಯ ಮಹಿಳೆಯರು ಇಂದು ಸ್ವಾವಲಂಬಿಯಾಗಿ ಬದುಕುವಂತಾಗಿದೆ” ಎಂದರು. ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್. ಶುಭಹಾರೈಸಿದರು. ಸಮಾರಂಭದಲ್ಲಿ ಸವಣೂರು ಗ್ರಾ.ಪಂ. ಆಡಳಿತಾಧಿಕಾರಿ ಹರೀಶ್ ಕೆ ಗೌರವ ಉಪಸ್ಥಿತರಿದ್ದರು.
ಸನ್ಮಾನ ಸಮಾರಂಭ : ಈ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಹಿರಿಯ ಸಹಕಾರಿ ಜಾಕೆ ಮಾಧವ ಗೌಡ ಅವರಿಗೆ ಆದರ್ಶ ರಜತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಆದರ್ಶ ಸಹಕಾರ ಸಂಘದಲ್ಲಿ ಪ್ರಾರಂಭದಿಂದಲೂ ಇದ್ದು ಪ್ರಸ್ತುತ ಆ ಅಂಛದಿಂದಲೂ ಇದ್ದು ಪ್ರಸ್ತುತ ಆಡಳಿತ ಮಂಡಳಿಯಲ್ಲಿರುವ ನಿರ್ದೇಶಕರುಗಳಾದ ಯನ್. ಸುಂದರ ರೈ ಸವಣೂರು, ಎಸ್.ಎಂ.ಬಾಪೂ ಸಾಹೇಬ್ ಸುಳ್ಯ, ಬಿ. ಮಹಾಬಲ ರೈ ಬೊಳಂತೂರು, ಶ್ರೀಮತಿ ಪೂರ್ಣಿಮಾ ಎಸ್. ಆಳ್ವ ಮಂಗಳೂರು, ಸಂಘದ ಮಹಾ ಪ್ರಬಂಧಕ ವಸಂತ ಜಾಲಾಡಿ, ನಿವೃತ್ತ ಸಿಬ್ಬಂದಿ ಹೆಚ್. ಮೋನಪ್ಪ ಗೌಡ ವಿಟ್ಲ, ಶ್ರೀನಿವಾಸ ತಂತ್ರಿ ಉಜಿರೆ, ಮನೋಜ್ ಕುಮಾರ್ ಕೆ.ಎಸ್, ಶ್ರೀಮತಿ ಸುರೇಖಾ ಬಿ., ಪಿಲ್ಮ ಸಂಗ್ರಾಹಕರಾದ ಕೃಷ್ಣಪ್ಪ ಎಂ., ಶ್ರೀನಿವಾಸ ಡಿ., ಮಂಜುನಾಥ ಶೆಟ್ಟಿ, ಗುತ್ತಿಗೆದಾರ ಪ್ರಭಾಕರ ಎಂ.ಎನ ಇಂಜಿನಿಯರ್ ಸಚ್ಚಿದಾನಂದ ಡಿ. ಅವ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸಹಕಾರ ರತ್ನ ಸೀತಾರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ನಿರ್ದೇಶಕರಾದ ಜೈರಾಜ್ ಭಂಡಾರಿ ವಂದಿಸಿದರು. ವಿದುಷಿ ಪವಿತ್ರಾ ರೂಪೇಶ್ ಪುತ್ತೂರು ಪ್ರಾರ್ಥಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.