Connect with us

ಇತರ

ಪುತ್ತೂರಿಗೆ ಬಂತು ಬ್ಲಾಕ್ ಕಾಂಗ್ರೆಸ್ ವಾಹನ: ಪಕ್ಷ ಸಂಘಟನೆಗೆ ಒತ್ತು: ಶಾಸಕ ಅಶೋಕ್ ರೈ

Published

on

ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಹಂತದಲ್ಲಿರುವಾಗಲೇ ರಾಜ್ಯದಲ್ಲೇ ಮೊದಲ ಬಾರಿ ಎಂಬಂತೆ ಬ್ಲಾಕ್ ಅಧ್ಯಕ್ಷರುಗಳಿಗೆ ವಾಹನವೊಂದನ್ನು ಒದಗಿಸಲಾಗಿದ್ದು ಇದು ಪಕ್ಷದ ಬೆಳವಣಿಗೆಗೆ ಮತ್ತು ಸಂಘಟನೆಗೆ ಬಳಕೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

 

ಪುತ್ತೂರಿಗೆ ಬಂದಿರುವ ಬೊಲೆರೋ ವಾಹನವನ್ನು ಬ್ಲಾಕ್ ಕಾಂಗ್ರೆಸ್ ವಾಹನ ಎಂದು ನಾಮಕರಣ ಮಾಡುವ ಮೂಲಕ ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಹಾಗೂ ವಿಟ್ಲ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರಿಗೆ ವಾಹನದ ಕೀಯನ್ನು ಶಾಸಕರು ಹಸ್ತಾಂತರ ಮಾಡಿದರು.

ರಾಜ್ಯದೆಲ್ಲೆಡೆ ಸ್ವಂತ ಜಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಬೇಕೆಂಬುದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ರವರ ಕಲ್ಪನೆಯಾಗಿದ್ದು ಅದರಂತೆ ಪುತ್ತೂರಿನ ಬಸ್ ನಿಲ್ದಾಣದ ಬಳಿ ಈಗಾಲೇ ೨೦ ಸಾವಿರ ಚ.ಅಡಿಯ ಕಾಂಗ್ರೆಸ್ ಭವನ ನಿರ್ಮಾಣ ಹಂತದಲ್ಲಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಭವನ ನಿರ್ಮಾಣ ಹಂತಕ್ಕೆ ಬರುವಾಗ ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ಉದ್ಘಾಟನೆಯಾಗಲಿದೆ. ಭವನ ನಿರ್ಮಾಣಕ್ಕೆ ಮೊದಲೇ ಬ್ಲಾಕ್ ಗೆ ವಾಹನವನ್ನು ಒದಗಿಸಲಾಗಿದೆ ಎಂದು ಹೇಳಿದರು. ರಾಜ್ಯದೆಲ್ಲೆಡೆ ಎಲ್ಲಾ ಬ್ಲಾಕ್ ಘಟಕಕ್ಕೆ ವಾಹನವನ್ನು ಒದಗಿಸುವ ಮೂಲಕ ಪಕ್ಷದ ಅಧ್ಯಕ್ಷರುಗಳಿಗೆ ಕ್ಷೇತ್ರ ಪ್ರಚಾರಕ್ಕೆ ಅನುವು ಮಾಡಿಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಮೂರು ಬ್ಲಾಕ್‌ಗೆ ಸದ್ಯ ಒಂದೇ ವಾಹನ ಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್‌ಗೆ ಈ ವಾಹನವನ್ನು ಬಳಸಲಗುತ್ತದೆ. ಶಾಸಕರು ಯಾವ ಕ್ಷೇತ್ರ ವ್ಯಾಪ್ತಿಗೆ ತೆರಳುತ್ತಾರೋ ಆ ವೇಳೆ ಆಯಾ ಬ್ಲಾಕಿನ ಅಧ್ಯಕ್ಷರು ಈ ವಾಹನದಲ್ಲಿ ಸಂಚರಿಸುತ್ತಾರೆ. ಪಕ್ಷದ ಅಭಿವೃದ್ದಿಯ ದೃಷ್ಟಿಯಿಂದ ಈ ವಾಹನವನ್ನು ತರಿಸಲಾಗಿದೆ ಎಂದು ಶಾಸಕರು ಹೇಳಿದರು.
ಕಾಂಗ್ರೆಸ್‌ನಲ್ಲಿ ನಾನಿನ್ನೂ ಮಗು ನಾನು ಕಾಂಗ್ರೆಸ್‌ಗೆ ಸೇರಿ ಮೂರುವರೆ ವರ್ಷ ಆಗಿದೆ. ಪಕ್ಷಕ್ಕೆ ನಾನು ಏನೂ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿಲ್ಲ ಎಂಬುದು ನನ್ನ ಭಾವನೆ. ಪಕ್ಷಕ್ಕೆ ಕಾಂಗ್ರೆಸ್ ಭವನ , ಅಧ್ಯಕ್ಷರುಗಳಿಗೆ ಬೊಲೆರೋ ವಾಹನ ನೀಡಿರುವುದು ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರ ಆಶೀರ್ವಾದದ ಫಲವಾಗಿದೆ. ಹಿರಿಯರ ಮಾರ್ಗದರ್ಶನದಂತೆ ಪಕ್ಷವು ಮುನ್ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಅಭಿವೃದ್ದಿಗೆ , ಪಕ್ಷದ ಸಂಘಟನೆಗೆ ಪ್ರತೀಯೊಬ್ಬ ಕಾರ್ಯಕರ್ತನೂ ಕೆಲಸ ಮಾಡಬೇಕು. ಪಕ್ಷದಿಂದ ನಮಗೆ ಏನು ಸಿಕ್ಕಿದೆ ಎನ್ನುವ ಬದಲು ನಾವು ಪಕ್ಷಕ್ಕೆ ಏನು ನೀಡಿದ್ದೇವೆ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅನಿವಾರ್ಯತೆ ಯಾಕೆ ಇದೆ ಎಂಬುದನ್ನು ನಾವು ಪ್ರತೀಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷವಿದ್ದಲ್ಲಿ ಮಾತ್ರ ಈ ದೇಶದಲ್ಲಿ ಬಡವರು ನೆಮ್ಮದಿಯಾಗಿರಲು ಸಾಧ್ಯ ಎಂಬುದನ್ನು ಪ್ರತೀ ಮನೆಗೂ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದು ಶಾಸಕರು ಹೇಳಿದರು.

 
ವಿಟ್ಲ, ಉಪ್ಪಿನಂಗಡಿಯಲ್ಲೂ ಕಾಂಗ್ರೆಸ್ ಭವನ ಪುತ್ತೂರಿನಲ್ಲಿ ನಿರ್ಮಾಣವಾದಂತೆ ವಿಟ್ಲ ಹಗೂ ಉಪ್ಪಿನಂಗಡಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಲಿದೆ. ವಿಟ್ಲದಲ್ಲಿ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ, ಉಪ್ಪಿನಂಗಡಿಯಲ್ಲಿ ಜಾಗದ ಹುಡುಕಾಟದಲ್ಲಿದ್ದೇವೆ ಎಂದು ಶಾಸಕರು ತಿಳಿಸಿದರು.   ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಒಬ್ಬ ಶಾಸಕ ಪಕ್ಷದ ಎಲ್ಲಾ ಋಣವನ್ನು ತೀರಿಸುವ ಕೆಲಸವನ್ನು ಅಶೋಕ್ ರೈ ಅವರು ಮಾಡಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಸುಮಾರು ೨ ಕೋಟಿ ರೂ ವೆಚ್ಚದಲ್ಲಿ ಕಾಂಗ್ರೆಸ್ ಭವನ ಕೂಡಾ ನಿರ್ಮಾಣವಾಗುತ್ತಿದೆ. ಇದೀಗ ವಾಹನವೂ ಪಕ್ಷಕ್ಕಾಗಿ ಬಂದಿದೆ. ಪಕ್ಷದ ಸಂಘಟನೆಗಾಗಿ ಬಂದ ವಾಹನ ಪಕ್ಷದ ಬೆಳವಣಿಗೆಗೆ ಬಳಕೆಯಾಗಲಿ ಎಂದು ಶುಭ ಹಾರೈಸಿದರು.

ಪಕ್ಷ ಚಟುವಟಿಕೆಗೆ ಪೂರಕವಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಲಾಕ್ ಕಾಂಗ್ರೆಸ್‌ಗೆ ವಾಹನವೊಂದು ಬಂದಿದೆ. ಇವತ್ತು ಕಾಂಗ್ರೆಸ್‌ಗೆ ಶುಭದಿನವಾಗಿದೆ. ಒಂದು ಕಡೆ ಪಕ್ಷದ ಭವನ ನಿರ್ಮಣವಾಗುತ್ತಿದೆ. ಇನ್ನೊಂದೆಡೆ ಪಕ್ಷದ ಶಾಸಕರು ಸಮರೋಪಾದಿಯಲ್ಲಿ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನಷ್ಟು ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಈ ವಾಹನ ಬಳಕೆಯಾಗಲಿ. ಮೂರು ಬ್ಲಾಕ್‌ಗಳಿಗೂ ಈ ವಾಹನ ಸದ್ಬಳಕೆಯಾಗಲಿ   ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಧರ್ ರೈ ಮಟಂತಬೆಟ್ಟು ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ, ಉದ್ಯಮಿ ಸಿಯಾನ್ ದರ್ಬೆ, ವಿಕ್ರಂ ರೈ ಸಾಂತ್ಯ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement