Published
9 hours agoon
By
Akkare News
ಸುಳ್ಯದ ಶ್ರೀರಾಮಪೇಟೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ವೇಳೆ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯಿಂದ ಆತಂಕಕಾರಿ ಘಟನೆ ನಡೆದಿದೆ. ರಸ್ತೆ ಬದಿಯ ಕಾಮಗಾರಿ ಸ್ಥಳದಲ್ಲಿ ತೆರೆಯಲಾಗಿದ್ದ ಚರಂಡಿಗೆ ಮಗು ಏಕಾಏಕಿ ಬಿದ್ದಿದ್ದು, ಸ್ಥಳೀಯರು ಸಮಯಕ್ಕೆ ಸರಿಯಾಗಿ ರಕ್ಷಿಸಿ ಮೇಲಕ್ಕೆತ್ತಿದ್ದಾರೆ.


ಜೆಸಿಬಿ ಮೂಲಕ ರಸ್ತೆ ಬದಿಯನ್ನು ಅಗೆದು ಕಾಮಗಾರಿ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಫುಟ್‌ಪಾತ್‌ನ ಚರಂಡಿ ಸ್ಲ್ಯಾಬ್‌ಗಳನ್ನು ತೆರವುಗೊಳಿಸಲಾಗಿತ್ತು. ಮನೆಯವರೊಂದಿಗೆ ನಡೆದುಕೊಂಡು ಬರುತ್ತಿದ್ದ ಮಗು ಕಾಮಗಾರಿ ನಡೆಯುತ್ತಿದ್ದ ಸ್ಥಳದತ್ತ ಸಾಗುತ್ತಿದ್ದ ವೇಳೆ, ಫುಟ್‌ಪಾತ್‌ನಲ್ಲಿ ತೆರೆದಿದ್ದ ಚರಂಡಿ ಗಮನಕ್ಕೆ ಬಾರದೆ ಏಕಾಏಕಿ ಒಳಗೆ ಬಿದ್ದಿದೆ. ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ಧಾವಿಸಿ ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿದ್ದಾರೆ. 



