Published
13 hours agoon
By
Akkare News
ಈ ಬಾರಿ ಅತಿಥಿಗಳು ಬರುವ ತನಕ ಕಾಯದೆ ಬೆಳಿಗ್ಗೆ 10 ಗಂಟೆಗೆ ವಸ್ತ್ರ ವಿತರಣೆ ನಡೆಯಲಿದೆ. ಬೆಳಿಗ್ಗೆ ದೋಸೆ, ಮಧ್ಯಾಹ್ನ ಊಟ, ಸಂಜೆ ದೋಸೆ, ಎಷ್ಟೇ ಜನರು ಬಂದರೂ ವಸ್ತ್ರ ವಿತರಣೆ, ಮಕ್ಕಳಿಗೆ ಗೂಡುದೀಪ ಸ್ಪರ್ಧೆ, 10 ಜನ ಬಡ ಸಾಧಕರಿಗೆ ಸನ್ಮಾನ ನಡೆಯಲಿದೆ.
ಬಟ್ಟಲು, ಸೀರೆ, ಬೆಡ್ ಶೀಟ್ಗೆ ಪ್ರತ್ಯೇಕ ಕೌಂಟರ್ ಇರಲಿದೆ. ಒಂದು ಕೌಂಟರ್ನಲ್ಲಿ ಒಂದು ವಸ್ತು ಮಾತ್ರ ವಿತರಿಸಲಾಗುತ್ತದೆ. ಕೈ ಬೆರಳಿಗೆ ಶಾಯಿ ಗುರುತು ಹಾಕಲಾಗುತ್ತಿದ್ದು, ಒಂದು ಕೌಂಟರ್ನಲ್ಲಿ ಪಡೆದವರು ಇನ್ನೊಂದು ಕೌಂಟರ್ನಲ್ಲಿ ಪಡೆಯಲು ಸಾಧ್ಯವಿಲ್ಲ. ಜನ ಒಂದೆಡೆ ಸೇರಿ ಗೊಂದಲವಾಗುವುದನ್ನು ತಪ್ಪಿಸಲು ದೊಡ್ಡದಾದ ಸರತಿ ಸಾಲು ಮಾಡಲಾಗುವುದು. ಬಟ್ಟಲು ಜೊತೆಗೆ ಬೆಡ್ಶೀಟ್ ನೀಡಲಾಗುವುದು. ಈ ಬಾರಿ ಗುಣಮಟ್ಟದ ಸೀರೆ, ಬೆಡ್ಶೀಟ್ಗಳನ್ನೇ ವಿತರಿಸಲಾಗುವುದು. ಎರಡು ವರ್ಷ ಗ್ಯಾರಂಟಿಯಿದೆ.
ಕಳೆದ ಬಾರಿಯಂತೆ ಗೂಡುದೀಪ ಸ್ಪರ್ಧೆ, ಹತ್ತು ಜನ ಬಡ ಸಾಧಕರಿಗೆ ಸನ್ಮಾನ ನಡೆಯಲಿದೆ. ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕುಗೊಳಿಸಿ ಸಂಗೀತ ರಸಮಂಜರಿ ಮಾತ್ರ ನಡೆಸಲಾಗುವುದು ಎಂದು ಶಾಸಕ ಅಶೋಕ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





