Published
2 days agoon
By
Akkare News
ಅವರು ನ.16 ರಂದು ಸವಣೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಛೇರಿ ಕಟ್ಟಡ, ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಹಾಗೂ ರಜತ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ “ಪ್ರಾಮಾಣಿಕ ಪ್ರಯತ್ನ, ವಿಶ್ವಾಸ ಮತ್ತು ಶಿಸ್ತು ಅವರನ್ನು ಎತ್ತರಕ್ಕೆ ಬೆಳೆಸಿದೆ” ಎಂದರು.
ಮಂಗಳೂರಿನ ಎ.ಜೆ. ಶೆಟ್ಟಿ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಚೇರ್ ಮ್ಯಾನ್ ಡಾ. ಎ.ಜೆ ಶೆಟ್ಟಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ “ರಜತ ಸಂಭ್ರಮದಲ್ಲಿರುವ ಸಹಕಾರಿ ಸಂಘ ಶೀಘ್ರ 25 ಶಾಖೆಗಳನ್ನು ಹೊಂದಲಿ. ಆ ಶಕ್ತಿಯನ್ನು ಸೀತಾರಾಮ ರೈಗಳಿಗೆ ದೇವರು ನೀಡಲಿ” ಎಂದರು. ಶಾಸಕಿ ಭಾಗೀರಥಿ ಮುರುಳ್ಯ ಅವರು ಸವಣೂರು ಶಾಖೆಯ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ “ಸೀತಾರಾಮ ರೈಗಳ ಸಂಘಟನಾತ್ಮಕ ಕೆಲಸ ಕಾರ್ಯ ಸಹಕಾರಿ ಸಂಘದ ಅಭಿವೃದ್ಧಿಗೆ ಕಾರಣವಾಗಿದೆ” ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೂಟ್ಟು ಅವರು ಸಹಕಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ “ಸೀತಾರಾಮ ರೈಗಳು ನಮಗೆಲ್ಲಾ ಆದರ್ಶಪಾಯರು. ಅವರು ಮುಟ್ಟಿದ ಕೆಲಸ ಯಶಸ್ಸು, ಸೀತಾರಾಮ ರೈರವರು ಹಾಗೂ ರಾಜೇಂದ್ರ ಕುಮಾರ್ ಅವರು ಜೋಡೆತ್ತುಗಳಾಗಿ ಮಾಡಿದ ಕೆಲಸದಿಂದ ಸಹಕಾರಿ ಕ್ಷೇತ್ರ ಇಷ್ಟು ಎತ್ತರಕ್ಕೆ ಬೆಳೆದಿದೆ” ಎಂದರು. ರಜತ ಮಹೋತ್ಸವದ ಸವಿ ನೆನಪಿಗಾಗಿ ನಿರ್ಮಿಸಿದ ಸಾರ್ವಜನಿಕ ಬಸ್ಸು ನಿಲ್ದಾಣವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿ ಮಾತನಾಡಿ “ಹುಟ್ಟೂರಿನ ಮೇಲಿನ ಪ್ರೀತಿಯಿಂದ ಸವಣೂರನ್ನೇ ಸಹಕಾರಿ ಕಾಶಿಯನ್ನಾಗಿ ಮಾಡಿದ್ದಾರೆ. 50ನೇ ವರ್ಷಕ್ಕೆ ಆದರ್ಶ ಬ್ಯಾಂಕ್ ಆಗಲಿ” ಎಂದು ಹಾರೈಸಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ರಾಷ್ಟ್ರೀಕೃತ ಬ್ಯಾಂಕ್ ಗಳು ವಿಲೀನ ಆಗುತ್ತಿರುವ ಕಾಲದಲ್ಲಿ ಸಹಕಾರಿ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಬೆಳೆದಿದೆ. ಸಹಕಾರಿ ಸಂಘಗಳು ಸದಸ ಉತ್ತಮ ಸೇವೆ ನೀಡುತ್ತಿದೆ. ಬಡವರು ಮಹಿಳೆಯರು ಇಂದು ಸ್ವಾವಲಂಬಿಯ ಮಹಿಳೆಯರು ಇಂದು ಸ್ವಾವಲಂಬಿಯಾಗಿ ಬದುಕುವಂತಾಗಿದೆ” ಎಂದರು. ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್. ಶುಭಹಾರೈಸಿದರು. ಸಮಾರಂಭದಲ್ಲಿ ಸವಣೂರು ಗ್ರಾ.ಪಂ. ಆಡಳಿತಾಧಿಕಾರಿ ಹರೀಶ್ ಕೆ ಗೌರವ ಉಪಸ್ಥಿತರಿದ್ದರು.





