Published
2 days agoon
By
Akkare News
ನರರೋಗ ತಜ್ಞೆ ಮತ್ತು ಜನಪ್ರಿಯ ವೈದ್ಯಕೀಯ ಪ್ರಭಾವಿ ವ್ಯಕ್ತಿಯಾಗಿದ್ದ ಡಾ. ಕುಂಕಾಲ ಲಾವಣ್ಯ ಅವರು, ಕೇವಲ 32ನೇ ವಯಸ್ಸಿನಲ್ಲಿ ಹಠಾತ್ ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾಗಿ ನಿಧನರಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಗವಂತ ಕರುಣಿಸಿದ್ದು 32 ವರ್ಷ ಆಯಸ್ಸು ಈ ವೈದ್ಯೆ ಡಾ. ಕುಂಕಾಲ ಲಾವಣ್ಯ ಅವರು ತಮ್ಮ ಇಡೀ ಜೀವನವನ್ನು ಇತರ ಜೀವ ಉಳಿಸಲು, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸೇವೆ ನೀಡಲು ಮುಡಿಪಾಗಿಟ್ಟಿದ್ದರು. ಸಣ್ಣ ವಯಸ್ಸಿನಲ್ಲಿ ಸಮಯದ ಕುರಿತು ತುಡಿತ ಹೊಂದಿದ್ದರು. ಮುಂದೆ ಭವಿಷ್ಯದಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಇಚ್ಛಿಸಿದ್ದರು ಎನ್ನಲಾಗಿದೆ. ಆದರೆ ಅವರ ಪಾಲಿಗೆ ವಿಧಿಯಾಟವೋ ಬೇರೆಯಾಗಿತ್ತು. ಭಗವಂತ ಕರುಣಾಮಯಿ ವೈದ್ಯೆಗೆ ನೀಡಿದ್ದು ಕೇವಲ 32 ವರ್ಷ ಆಯಸ್ಸು ಮಾತ್ರ.
ಬಡವರ ಪಾಲಿಗೆ ಬೆಳಕಾಗಿದ್ದ ವೈದ್ಯೆ ಈ ವಿಚಾರವನ್ನು ಲಿಂಕ್ಡ್ ಇನ್ನಲ್ಲಿ Mohd Intzar Ali ಎನ್ನುವವರು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಪ್ರಕಾರ, ಮೃತ ವೈದ್ಯೆಯು, ಅವರು ಕೇವಲ ಒಬ್ಬ ವೈದ್ಯರಾಗಿರಲಿಲ್ಲ. ಅಸಂಖ್ಯಾತ ಜನರಿಗೆ ಅವರು ಭರವಸೆಯ ಬೆಳಕಾಗಿದ್ದರು. ಅಗತ್ಯವಿದ್ದವರಿಗೆ ಅವರು ಉಚಿತ ವೈದ್ಯಕೀಯ ಸಮಾಲೋಚನೆಗಳನ್ನು ನೀಡುತ್ತಿದ್ದರು. ಬಡವರಿಗೆ ಸಹಾಯ ಮಾಡಲು ತಮ್ಮ ವೃತ್ತಿ, ಜ್ಞಾನವನ್ನು ಬಳಸುತ್ತಿದ್ದರು.
ಬಡವರ ಮೇಲೆ ಅಪಾರ ದಯೆ, ಸಹಾನುಭೂತಿ ಹೊಂದಿದ್ದು, ನಿಸ್ವಾರ್ಥ ಸೇವೆಯ ಮೂಲಕ ಅವರು ಅನೇಕರ ಬದುಕನ್ನು ಹಸನು ಮಾಡಿದ್ದರು. ತಮ್ಮ ಕೆಲಸಗಳಿಂದಲೇ ಅಪಾರ ಜನರಿಗೆ ಹತ್ತಿರವಾಗಿದ್ದರು. ಇಂದು ಅವರು ಈ ಜಗತ್ತನ್ನು ಅಕಾಲಿಕವಾಗಿ ತೊರೆದಿರಬಹುದು. ಆದರೆ ಅವರ ದಯೆ ಮತ್ತು ಒಳಿತಿನ ನೆನಪುಗಳು ಸದಾ ಜೀವಂತವಾಗಿರುತ್ತವೆ. ಒಬ್ಬರ ಜೀವನ ಕೊನೆಗೊಳ್ಳಬಹುದು, ಆದರೆ ನಾವು ಮಾಡಿದ ಒಳ್ಳೆಯ ಕೆಲಸಗಳು ಎಂದಿಗೂ ಅಳಿಸಿಹೋಗುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲ ಎಂದು ಪ್ರಾರ್ಥಿಸಲಾಗಿದೆ. 
ಸಮಾಜ, ಜನರ ಸೇವೆಗೆ ಮೀಸಲಾದ ಜೀವನವು ಕಾಲ ಉರುಳಿದ ಮೇಲೂ ಅಳಿಯದೇ ಉಳಿದಿರುತ್ತದೆ. ಅಂಥದ್ದೊಂದು ಪರಂಪರೆಯನ್ನು ಇವರು ಬಿಟ್ಟುಹೋಗುತ್ತದೆ. ಅವರ ದಯೆ ಮತ್ತು ಸಹಾನುಭೂತಿ ಸ್ಮರಣೀಯ ಎಂದು ತಿಳಿಸಿದ್ದಾರೆ. 



